ಹರಪನಹಳ್ಳಿ, ಮಾ. 20 – ದಾವಣಗೆರೆ ಲೋಕಸಭೆ ಚುನಾವಣೆ ಬಿಜೆಪಿಯ ಆಭ್ಯರ್ಥಿ ಗಾಯತ್ರಿ ಜಿ.ಎಂ. ಸಿದ್ದೇಶ್ವರ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಉಚ್ಚಂಗೆಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ಮಹಾಭಲೇಶ್ವರ ಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ವಡ್ಡಿನಹಳ್ಳಿ ಮಂಜುನಾಥ, ಪೋತಲಗಟ್ಟೆ ತಿಮ್ಮಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರೇವಂತ್ ಪಾಟೀಲ್, ಮುಖಂಡ ಫಣಿಯಾಪುರ ಲಿಂಗರಾಜ, ರಾಗಿಮಸಲಾಡ ರೇವಣ್ಣ, ಕಲ್ಲಹಳ್ಳಿ ಸುರೇಶ್, ಬಿ,ಕೆ, ವಿಜಯ್ ಕುಮಾರ್, ಕ್ಯಾರಕಟ್ಟೆ ಶಿವಯೋಗಿ, ಬಸವರಾಜ ಕೆಂಚಪುರ, ಚಟ್ನಿಹಳ್ಳಿ ಜಂಬಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.