ದಾವಣಗೆರೆ,ಮಾ.20- ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ಉಚಿತ ರಕ್ತದ ಗುಂಪಿನ ತಪಾಸಣಾ ಶಿಬಿರವನ್ನು ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿತ್ತು.
ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ. ಎ. ಎಂ. ಶಿವಕುಮಾರ್ ನೇತೃತ್ವದಲ್ಲಿ, ಗೌರವ ಸಭಾಪತಿ ಗೌಡರ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಅನಂದ್ ಜ್ಯೋತಿ, ನಿರ್ದೇಶಕರಾದ ಕರಿಬಸಪ್ಪ ಟಿ, ನಾಗರಾಜ್ ಕೆ.ಕೆ, ಮೊಹಮ್ಮದ್ ಇನಾಯತುಲ್ಲಾ, ರವಿಕುಮಾರ್ ಎ.ಜೆ, ವೀರಭದ್ರಪ್ಪ, ಎಂ.ಜಿ ಶ್ರೀಕಾಂತ್, ಚನ್ನಬಸವ ಶೀಲವಂತ್, ವ್ಯವಸ್ಥಾಪಕ ರವೀಂದ್ರನಾಥ್ ಆರ್.ಧಾವಸ್ಕರ್, ಸಂಚಾಲಕರು ಮತ್ತು ಆಪ್ತ ಸಮಾಲೋಚಕ ಶಿವಕುಮಾರ ಎನ್.ಜಿ, ಪ್ರಯೋಗ ಶಾಲಾ ತಂತ್ರಜ್ಞ ಮೇಲ್ವಿಚಾರಕ ವಿನಾಯಕ ಆರ್, ಕೊಟ್ರೇಶ್ ಇತರರು ಹಾಜರಿದ್ದರು.