ಹರಿಹರದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಹರಿಹರದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಹರಿಹರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುತ್ತಿರುವ 13ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು ಬೆಳಗ್ಗೆ 9 ಗಂಟೆಗೆ ಶ್ರೀನಿಧಿ ಕೆ. ಗಿರಿಜಾಂಬ ಅವರಿಂದ ವೀಣಾವಾದನ ಹಾಗೂ ಗಾನ ಲಹರಿ ವಿದ್ಯಾಲಯದಿಂದ ಸುಗಮ ಸಂಗೀತ ಆಯೋಜಿಸಲಾಗಿದೆ.

9-30 ಕ್ಕೆ ಕವಿಗೋಷ್ಟಿ ಅಧ್ಯಕ್ಷತೆ : ಸಾಹಿತಿ ಜೆ. ಕಲೀಂಬಾಷಾ, ಆಶಯ ನುಡಿ : ಕವಿ ಕೆ.ಪಿ. ತಾರೇಶ್ ಅಣಬೇರು.  ಬೆಳಗ್ಗೆ 10-30 ಕ್ಕೆ ಗೋಷ್ಠಿ 5 `ಸಾಂಸ್ಕೃತಿಕ ನಾಯಕ ವಿಶ್ವ ಗುರುಬಸವಣ್ಣ’  ಮಠಾಧೀಶ್ವರರ ವಿಶೇಷ ಚಿಂತನ, ಮಂಥನ, ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು, ನಂದಿಗುಡಿ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳು, ಹೊಸಳ್ಳಿ ವೇಮನ ಮಠದ ಶ್ರೀ ವೇಮಾನಂದ ಸ್ವಾಮಿಗಳು, ಯಲವಟ್ಟಿ ಯೋಗಾನಂದ ಸ್ವಾಮಿಗಳು. 

ಮಧ್ಯಾಹ್ನ 12 ಗಂಟೆಗೆ  ಗೋಷ್ಠಿ -6.  ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ.  ಆಶಯ ನುಡಿ ಡಾ ಪಿ. ಶಿವಲಿಂಗಪ್ಪ ಚಿತ್ರದುರ್ಗ, ಗೌರವ ಉಪಸ್ಥಿತಿ ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಇತರರು. ಮಧ್ಯಾಹ್ನ 1-30 ಕ್ಕೆ ಗೋಷ್ಠಿ- 7. `ಮಧ್ಯ ಕರ್ನಾಟಕ ಚಳವಳಿಯ ಸ್ವರೂಪಗಳು’ ಅಧ್ಯಕ್ಷತೆ  ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, `ರೈತ, ಕಾರ್ಮಿಕ ಚಳವಳಿ’ ಪತ್ರಕರ್ತ ಬಿ.ಎನ್. ಮಲ್ಲೇಶ್, ಸಾಮಾಜಿಕ ಸಾಂಸ್ಕೃತಿಕ ಚಳವಳಿ ಪ್ರಾಚಾರ್ಯ ಡಾ. ದಾದಾಪೀರ್ ನವಿಲೇಹಾಳ್, `ಕನ್ನಡ ಪರ ಚಳವಳಿಗಳು’ ಸಾಹಿತಿ  ಡಾ. ಆನಂದ್ ಋಗ್ವೇದಿ  ವಿಷಯ ಮಂಡನೆ ಮಾಡಲಿದ್ದಾರೆ.  

ಮಧ್ಯಾಹ್ನ 3-30 ಕ್ಕೆ ಬಹಿರಂಗ ಅಧಿವೇಶನ. ಅಧ್ಯಕ್ಷತೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ ವಾಮದೇವಪ್ಪ. ನಿರ್ಣಯ ಮಂಡನೆ ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಗೌರವ ಕಾರ್ಯದರ್ಶಿಗಳು ದಿಳ್ಳೆಪ್ಪ, ರೇವಣಸಿದ್ದಪ್ಪ, ಸಂಘಟನಾ ಕಾರ್ಯದರ್ಶಿಗಳು ಸಿ.ಜೆ. ಜಗದೀಶ್, ಜಿಗಳಿ ಪ್ರಕಾಶ್, ಸಹ ಕಾರ್ಯದರ್ಶಿಗಳಾದ ಇ.ಎಂ‌. ಮಂಜುನಾಥ್, ಕೆ.ಎಸ್. ವೀರೇಶ್ ಪ್ರಸಾದ್, ತಾಲ್ಲೂಕು ಅಧ್ಯಕ್ಷರಾದ  ಸುಮತಿ ಜಯ್ಯಪ್ಪ,   ಡಿ.ಎಂ. ಮಂಜುನಾಥಯ್ಯ,   ಎಲ್.ಜಿ. ಮಧುಕುಮಾರ್,  ಜಿ. ಮುರುಗೇಶಪ್ಪ,   ಕೆ. ಸುಜಾತಮ್ಮ,  ಡಿ.ಎಂ. ಹಾಲಾರಾಧ್ಯ.

ಸಂಜೆ 4 ಗಂಟೆಗೆ  ಸಾಧಕರಿಗೆ ಸನ್ಮಾನ: ಅಧ್ಯಕ್ಷತೆ   ಜಿಲ್ಲಾಧಿಕಾರಿ  ಡಾ ಎಂ.ವಿ. ವೆಂಕಟೇಶ್,   ಸನ್ಮಾನ ದಾವಿವಿ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ. ಮುಖ್ಯ ಅತಿಥಿಗಳು ಜಿಪಂ ಸಿಇಓ ಸುರೇಶ್ ಇಟ್ನಾಳ್ ಇತರರು, ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜೀ, ಡಾ. ಎಸ್. ಹೆಚ್. ಪ್ಯಾಟಿ, ಪ್ರೊ ಎಂ.ಬಸವರಾಜ್, ಡಾ ಡಿ.ಡಿ. ಸಿಂದಗಿ, ಟಿ.ವಿ. 9 ರಾಮು  ಸೇರಿದಂತೆ 31 ಜನರಿಗೆ ವಿವಿಧ ರಂಗಗಳಲ್ಲಿ ಸೇವೆಯನ್ನು ಸಲ್ಲಿಸಿರುವ ಮಹನೀಯರಿಗೆ ಸನ್ಮಾನ.

ಸಂಜೆ 5-30 ಕ್ಕೆ ಸಮಾರೋಪ ಸಮಾರಂಭ. ಅಧ್ಯಕ್ಷತೆ ಜಿಲ್ಲಾ ಕಸಾಪ  ಅಧ್ಯಕ್ಷ ಬಿ. ವಾಮದೇವಪ್ಪ, ಸಮಾರೋಪ ಭಾಷಣ ಬೆಂಗಳೂರಿನ ಪ್ರಾಧ್ಯಾಪಕರಾದ  ಡಾ ಎಂ.ಎಸ್. ಆಶಾದೇವಿ, ಸಮ್ಮೇಳನಾಧ್ಯಕ್ಷ ಪ್ರೊ ಸಿ.ವಿ ಪಾಟೀಲ್ ಅವರ ಸಮೀಕ್ಷಾ ನುಡಿ. ಮುಖ್ಯ ಅತಿಥಿ ಗಳಾಗಿ   ಧರ್ಮಗುರು ಹಜರತ್ ಖಾಜೀ ಷಂಶುದ್ಧೀನ್ ಬರಕಾತಿ,   ಫಾದರ್ ಜಾರ್ಜ್ ಕೆ.ಎಂ‌, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಎನ್.ಜಿ. ನಾಗನಗೌಡ್ರು ಸಿರಿಗೆರೆ, ಮಲೇಬೆನ್ನೂರು ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಚಿದಾನಂದಪ್ಪ, ಬಿ. ಎಂ. ವಾಗೀಶ್ ಸ್ವಾಮಿ,  ನಿಕಿಲ್ ಕೊಂಡಜ್ಜಿ,   ಜಿಲ್ಲಾ ಕಸಾಪ  ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ,  ಎಂ. ಬಸವಪ್ಪ, ಎಸ್.ಜಿ. ರಂಗನಾಥ, ಎಸ್.ಹೆಚ್ ಹೂಗಾರ್ , ಜಿ. ಎಂ. ಸದಾಶಿವಪ್ಪ  ಇತರರು.

ಸಂಜೆ 6-30ಕ್ಕೆ ಸಾಂಸ್ಕೃತಿಕ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ : ಪ್ರಾಚಾರ್ಯರಾದ  ಯಶಾ ದಿನೇಶ್, ದಾವಣಗೆರೆ. ಅಧ್ಯಕ್ಷತೆ : ಕಸಾಪ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್. ಸಮಾರಂಭ ಯಶಸ್ವಿಯಾಗಲು ಮೆರವಣಿಗೆ, ಪ್ರಚಾರ, ಪುಸ್ತಕ ಮಳಿಗೆ, ಚಿತ್ರಕಲಾ, ವೇದಿಕೆ, ಆಹಾರ
ಸಮಿತಿಯನ್ನು ರಚಿಸಲಾಗಿದೆ ಎಂದು  ಜಿಲ್ಲಾಧ್ಯಕ್ಷ ಬಿ.  ವಾಮದೇವಪ್ಪ ಹೇಳಿದರು.

error: Content is protected !!