ಪೊಲೀಸ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿ

ದಾವಣಗೆರೆ ಮಾ. 18 – ಭಾರತ ಸರ್ಕಾರದಿಂದ ದೆಹಲಿ ಪೆೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೆೊಲೀಸ್ ಪಡೆಗಳ ಸಬ್‍ಇನ್ಸ್‍ಪೆಕ್ಟರ್  ವಿವಿಧ ಹಂತದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು  ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಹರಿದ್ದಾರೆ.  

 ಆಸಕ್ತ ಅಭ್ಯರ್ಥಿಗಳು ವೆಬೆಸೈಟ್   htt://ssc.gov.in     ಮತ್ತು   www.ssc.kkr.kar.nic.in      ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆ ದಿನ. ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು 20 ರಿಂದ 25,  ಎಸ್ಸಿ, ಎಸ್ಟಿ-  ಒ.ಬಿ.ಸಿ, ಇ.ಎಸ್.ಎಂ ಇತರೆ ನಿರ್ದಿಷ್ಟ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ವಿವರಕ್ಕೆ ಸಂಪರ್ಕಿಸಿ : ಸಹಾಯವಾಣಿ – 08025502520, 0802 527342 ಅಥವಾ ಉದ್ಯೋಗ ವಿನಿಮಯ ಕಚೇರಿ, 08192-259446.

error: Content is protected !!