ನಗರದಲ್ಲಿ ಜಾತ್ರೆ : ಮದ್ಯ ಮಾರಾಟ ನಿಷೇಧ

ದಾವಣಗೆರೆ, ಮಾ. 18 – ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಎರಡು ದೇವಸ್ಥಾನಗಳ 500 ಮೀಟರ್ ವ್ಯಾಪ್ತಿಯಲ್ಲಿ ನಾಳೆ ದಿನಾಂಕ 19 ರ ಬೆಳಿಗ್ಗೆ 6 ರಿಂದ ನಾಡಿದ್ದು ದಿನಾಂಕ 20 ರ ಮಧ್ಯರಾತ್ರಿ 12 ರವರೆಗೆ  ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಆದೇಶಿಸಿದ್ದಾರೆ.

error: Content is protected !!