ದಾವಣಗೆರೆ, ಮಾ. 18- ವಿವಿಧ ಅಕಾಡೆಮಿಗಳಿಗೆ ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ಸದಸ್ಯರುಗಳಿಗೆ ಹಿರಿಯ ಚಿತ್ರ ಕಲಾವಿದರೂ ಆದ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಮಹಲಿಂಗಪ್ಪ ಎ. ಆಭಿನಂದನೆ ಸಲ್ಲಿಸಿರುತ್ತಾರೆ. ಪ್ರೊ ಎ.ಬಿ. ರಾಮಚಂದ್ರಪ್ಪ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಜಾನಪದ ಅಕಾಡೆಮಿ, ವೈ. ಕುಮಾರ್ ಶಿಲ್ಪಕಲಾ ಅಕಾಡೆಮಿ, ಶ್ರೀಮತಿ ಫಾತಿಮಾ, ಚಿತ್ರಕಲಾ ಅಕಾಡೆಮಿ ಮತ್ತು ಲಿಂಗಪ್ಪ ತೋರಣಗಟ್ಟಿ ಬಯಲಾಟ ಅಕಾಡೆಮಿ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಅಕಾಡೆಮಿಗಳಿಗೆ ನೇಮಕವಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಮಹಲಿಂಗಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
July 24, 2024