ದಾವಣಗೆರೆ, ಮಾ. 17 – ನಮ್ಮ ಭಾರತೀಯ ಸಂಸ್ಕೃತಿಯ ಪದ್ಧತಿಯನ್ನು ಎಲ್ಲಾ ಮಕ್ಕಳು ಅವಶ್ಯಕವಾಗಿ ಕಲಿಯಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕೆಂದು ರಾಯರ ಮಠದ ಪ್ರಧಾನ ಅರ್ಚಕ ಕೃಷ್ಣಾಚಾರ್ ಹೇಳಿದರು.
ಹಲವು ಮಕ್ಕಳು ರಾಮಾಯಣ, ಭಗವದ್ಗೀತೆ, ವಿಷ್ಣು ಸಹಸ್ರನಾಮ, ಉಚಿತವಾಗಿ ಕಳೆದ ಒಂದು ತಿಂಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ಹೆಚ್ಚು ಆಸಕ್ತಿ ಇರಬೇಕು, ಜೊತೆಯಲ್ಲಿ ಅವರ ತಾಯಂದಿರು ಹೆಚ್ಚು ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಉಚಿತವಾಗಿ ಸುಮಾರು 40 ಮಕ್ಕಳು ಭಾಗವಹಿಸುತ್ತಿದ್ದಾರೆ. ಈ ಒಂದು ಕಾರ್ಯಕ್ಕೆ ತಾಯಂದಿರೂ ಸಹ ಭಾಗವಹಿಸುತ್ತಿದ್ದಾರೆ. ಇದನ್ನು ಗಮನಿಸಿದ ಭರಮಸಾಗರ `ಜನತಾವಾಣಿ’ ವರದಿಗಾರ ಬಿ.ಜಿ. ಅನಂತಪದ್ಮನಾಭ ರಾವ್ ಅವರು, ಆಚಾರ್ ಅವರು ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭರಮಸಾಗರಕ್ಕೆ ತಾವು ಬಿಡುವು ಮಾಡಿ ಕೊಂಡು ಬರಲು ಮನವಿ ಮಾಡಿಕೊಂಡರು.