ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು
ಶ್ರೀಶೈಲಂ, ಮಾ. 15- ಎಲ್ಲ ಜ್ಞಾನಗಳ ಮೂಲ ಸ್ಥಾನವಾದ ಶಿವನ ಆದೇಶದಂತೆ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಅವತರಿಸಿದ ಜಗದ್ಗುರು ಪಂಡಿತಾರಾಧ್ಯರು ಪಾಂಡಿತ್ಯ ಪರಂಪರೆಯ ಪ್ರಥಮಾಚಾರ್ಯ ರಾಗಿರುವುದರಿಂದ ಪಂಡಿತರ ಪರಮಾ ಚಾರ್ಯರಾಗಿರುವರು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಶ್ರೀಶೈಲದಲ್ಲಿ ಶಿವರಾತ್ರಿ ಹಾಗೂ ಜಗದ್ಗುರು ಪಂಡಿತಾರಾಧ್ಯರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಈ ವಿಚಾರವನ್ನು ತಿಳಿಸಿದರು.
ಕೇವಲ ಶಾಸ್ತ್ರದ ತರ್ಕ-ವಿತರ್ಕಗಳಲ್ಲಿ ಕಾಲ ಕಳೆಯದೇ ಯುಕ್ತಿ, ಪ್ರಮಾಣ ಮತ್ತು ಅನುಭವಗಳ ಮೂಲಕ ಆತ್ಮಜ್ಞಾನವನ್ನು ಪ್ರಾಪ್ತ ಮಾಡಿಕೊಂಡು ವಿದ್ವಾಂಸನನ್ನೇ ಶಾಸ್ತ್ರದಲ್ಲಿ ಪಂಡಿತ ಎಂದು ಕರೆಯುತ್ತಾರೆ. ಇದು ಕೇವಲ ಹೆಸರಿಗೆ ಮಾತ್ರ ಪಂಡಿತಾರಾಧ್ಯ ಪೀಠವಾಗಿ ರದೆ, ಪೀಠದ ಈ ಹೆಸರು ಹಲವಾರು ಕಾರಣಗ ಳಿಂದ ಅನ್ವರ್ಥಕವಾಗಿದೆ. ಎಂದು ಹೇಳಿದರು.
ಪ್ರತಿವರ್ಷದಂತೆ ಬಯಲು ವೀರಭದ್ರ ಸ್ವಾಮಿ ದೇವಸ್ಥಾನದಿಂದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದವರೆಗೆ ಪ್ರಸ್ತುತ ಜಗದ್ಗುರು ಗಳ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.
ಜಗದ್ಗುರುಗಳು ಅನೇಕ ಶಿಷ್ಯರಿಂದ ಒಡ ಗೂಡಿ ಶ್ರೀ ಮಲ್ಲಿಕಾರ್ಜುನ್ ಜ್ಯೋತಿರ್ಲಿಂಗಕ್ಕೆ ರುದ್ರಾಭಿಷೇಕ ಮತ್ತು ಭ್ರಮರಾಂಬ ದೇವಿಗೆ ಕುಂಕುಮಾರ್ಚನೆ ಪೂಜೆ ಸಲ್ಲಿಸಿದರು ಮತ್ತು ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ವಿಶೇಷ ಪೂಜೆ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವೇರಿಸಿದರು. ಇದೇ ಸಮಯದಲ್ಲಿ ದೇವಸ್ಥಾನ ಆವರಣದಲ್ಲಿರುವ ಜಂಗಮ ಮಲ್ಲಿಕಾರ್ಜುನ ಜಗದ್ಗುರುಗಳ ಸಮಾಧಿಗೆ ಮಹಾಮಂಗಳಾರತಿ ಅರ್ಪಿಸಿದರು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಗಡ್ಡಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಮುಳ ವಾಡದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಶಿವ ರಾತ್ರಿ ಬ್ರಹ್ಮೋತ್ಸವದ ವಿಶೇಷ ಅಧಿಕಾರಿಗಳಾಗಿ ಆಗಮಿಸಿದ ಚಂದ್ರಶೇಖರ್ ಆಜಾದ್, ಆಡಳಿತಾಧಿಕಾರಿ ಪೆದ್ದಿರಾಜು ಮೊದಲಾದ ಅಧಿ ಕಾರಿಗಳು, ದೇವಸ್ಥಾನದ ಪ್ರಧಾನಾರ್ಚಕ ವೀರಯ್ಯ ಸ್ವಾಮಿ ಮೊದಲಾದ ಅರ್ಚಕರು, ಪೀಠದ ಮುಖ್ಯಪ್ರಬಂಧಕಮಂಜುನಾಥ್ ಸ್ವಾಮಿ ಯವರು ಪಾಲ್ಗೊಂಡಿದ್ದರು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಗಳಿಂದ ಆಗಮಿಸಿದ ಅನೇಕ ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಾವಣಗೆರೆ ಜಗದ್ಗುರು ಪಂಚಾಚಾರ್ಯ ಮಂದಿರದ ವ್ಯವಸ್ಥಾಪಕರಾದ ಎಂ. ಬನ್ನಯ್ಯ ಸ್ವಾಮಿ, ಶ್ರೀಮತಿ ಸುಧಾ ಕುಟುಂಬದವರು ಹಾಗೂ ಕೆ.ಎಂ. ಪರಮೇಶ್ವರಯ್ಯ ಶ್ರೀಮತಿ ಚಂದ್ರಿಕಾ, ಚಿ. ಮಂಥನ್ ಹಿರೇಮಠ್ ಮತ್ತು ಕುಟುಂಬದವರು ಭಾಗವಹಿಸಿದ್ದರು.