ನೀರು ಸರಬರಾಜು ಶುಲ್ಕ ಪಾವತಿಗೆ ಸೂಚನೆ

ದಾವಣಗೆರೆ, ಮಾ.15-  ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 24×7 ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗ್ರಾಹಕರು  ಬಳಕೆಗೆ ತಕ್ಕಂತೆ ನೀರಿನ ಶುಲ್ಕವನ್ನು ಪಾವತಿಸುವಂತೆ ಪೌರಾಯುಕ್ತರು  ತಿಳಿಸಿದ್ದಾರೆ.     

ನಗರಸಭೆ ಆವರಣದಲ್ಲಿರುವ ಹಣ ಪಾವತಿ ಕೇಂದ್ರದಲ್ಲಿಯೇ ಶುಲ್ಕ ಪಾವತಿಸಿ ರಶೀದಿ ಪಡೆಯಬೇಕು. ಅಥವಾ   ಆನ್‍ಲೈನ್ ಮೂಲಕ ಪಾವತಿಸಬಹುದು. ಬಿಲ್ ವಿತರಕರು, ಮೀಟರ್ ರೀಡರ್ ಕೈಯ್ಯಲ್ಲಿ ಹಣ ಕೊಡಬಾರದು.  ಯೋಜನಾ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯನ್ನು 8 ವರ್ಷಗಳ ಅವಧಿಯವರೆಗೆ ಗುತ್ತಿಗೆದಾರರಿಗೆ ನೀಡಲಾಗಿದ್ದು,  ನೀರಿನ ಶುಲ್ಕ ಪಾವತಿಸಿ, ನೀರು ಸರಬರಾಜು ಯೋಜನೆ ಕಾಮಗಾರಿಗಳ ಅಭಿವೃದ್ಧಿಗೆ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

ತುಂಗಭದ್ರಾ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನೀರು ಬಳಕೆದಾರರು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು  ಹಾಗೂ ನೀರನ್ನು ಮಿತವಾಗಿ ಬಳಸಬೇಕು.  ಪೈಪ್‌ಲೈನ್‍ಗೆ ಅನಧಿಕೃತ, ಅಕ್ರಮ ನಳ ಸಂಪರ್ಕಗಳು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಹಾಗೂ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದಲ್ಲಿ   ಗ್ರಾಹಕರ ಸೇವಾ ಕೇಂದ್ರ, ದೂ.ಸಂ: 6366962668 ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

error: Content is protected !!