ಹೊಸ ಹುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆ

ಹೊಸ ಹುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆ

ದಾವಣಗೆರೆ, ಮಾ. 13 – ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಹೊಸ ‘ಹುಂಡೈ ಕ್ರೆಟಾ ಎನ್ ಲೈನ್’ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಕೆ.ಜೆ. ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ. ಜಾವೀದ್ ಸಾಬ್ ಅವರು ಮಾರುಕಟ್ಟೆಗೆ ಪರಿಚಯಿಸಿದರು.

ಹೊಸ ‘ಹುಂಡೈ ಕ್ರೆಟಾ ಎನ್ ಲೈನ್’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೆ.ಜೆ. ಹುಂಡೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ. ಅಫಕ್ ರಾಜ್ವಿ ಹುಂಡೈಕ್ರೆಟಾ ಬ್ರ್ಯಾಂಡ್‍ನ ಯಶಸ್ಸು ಮತ್ತು ಪರಂಪರೆಯ ಮೇಲೆ ಹೊಸ ವಾಹನವನ್ನು ಉತ್ಪಾದಿಸಲಾಗಿದೆ ಎಂದು ತಿಳಿಸಿದರು.

ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವಿಹಂಗಮ ಸನ್‍ರೂಫ್, ವೆಂಟಿಲೇಟೆಡ್ ಸೀಟ್‍ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‍ಗಳು, ಮಲ್ಟಿ ಕಲರ್‍ಅಂಬಿಯೆಂಟ್ ಲೈಟಿಂಗ್, ಆಪಲ್ ಕಾರ್ ಪ್ಲೇ/ಅಂಡ್ರ್ಯಾಯ್ಡ್ ಆಟೋ, ಕನೆಕ್ಟೆಡ್ ಕಾರ್‍ಟೆಕ್, ವಾಯ್ಸ್ ಕಮಾಂಡ್‍ಗಳು ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನು ಇದು ಹೊಂದಿದೆ. 

ಇನ್ನೂ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‍ಬ್ಯಾಗ್‍ಗಳು, 360 ಡಿಗ್ರಿ ಕ್ಯಾಮೆರಾ, 18 ಇಂಚಿನ ಡೈಮಂಡ್ ಕಟ್ ಅಲೈ ವಿಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಇದು ಹೊಂದಿದೆ. ಎಕ್ಸ್ ಶೋರೂಂ ಬೆಲೆ 16.82 ಲಕ್ಷದಿಂದ ಆರಂಭಗೊಂಡು ರೂ.20.30 ಲಕ್ಷ ರೂಪಾಯಿ. ಸಮಾರಂಭದಲ್ಲಿ ಕೆ.ಜೆ. ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ. ಜಾವೀದ್ ಸಾಬ್, ವ್ಯವಸ್ಥಾಪಕ ನಿರ್ದೇಶಕ ಕೆ.ಜೆ. ಅಫಕ್ ರಾಜ್ವಿ, ಸಂಸ್ಥೆಯ ನಿರ್ದೇಶಕ ಕೆ.ಜೆ.ಅಬ್ರಾಹರ್, ಸೆಲ್ಸ್ ಮ್ಯಾನೇಜರ್ ಹಂಜಲ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!