ಮಲೇಬೆನ್ನೂರಿನಲ್ಲಿ ಇಂದು ತೇರು

ಶ್ರೀ ಬಸವೇಶ್ವರ ದೇವರ ರಥೋತ್ಸವವು ಇಂದು ಸಂಜೆ 4.30ಕ್ಕೆ ಜರುಗಲಿದೆ. ಬೆಳಿಗ್ಗೆ 8ಕ್ಕೆ ವಿವಿಧ ಪೂಜೆಗಳ ನಂತರ ಸಣ್ಣ ಉತ್ಸವದ ಮೆರವಣಿಗೆ ಮತ್ತು 9 ಗಂಟೆಗೆ ರಥಕ್ಕೆ ತೈಲಾಭಿಷೇಕ, ಮಧ್ಯಾಹ್ನ 12 ರಿಂದ ದೇವಸ್ಥಾನದಲ್ಲಿ ದಾಸೋಹ ನಡೆಯಲಿದ್ದು, ಇದೇ ದಿನ ಸಂಜೆ 4.30ಕ್ಕೆ ಗ್ರಾಮದ ಎಲ್ಲಾ ದೇವರ ಒಡಗೂಡಿ ಶ್ರೀ ಬೀರಲಿಂಗೇಶ್ವರ ಕಾರ್ಣಿಕೋತ್ಸವದ ನಂತರ ಶ್ರೀ ಬಸವೇಶ್ವರ ದೇವರ ರಥೋತ್ಸವವು ಜರುಗಲಿದೆ.

ನಾಳೆ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ವಿವಿಧ ಪೂಜೆಗಳ ನಂತರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ದೇವಸ್ಥಾನದಲ್ಲಿ ಜವಳ, ದಿಂಡು ಉರುಳುಸೇವೆ ಸೇರಿದಂತೆ ಇತ್ಯಾದಿ ಸೇವೆಗಳು ನಡೆಯಲಿದ್ದು, ಸಂಜೆ 8 ಕ್ಕೆ ಓಕುಳಿ ನಂತರ ದೇವರುಗಳನ್ನು ದೇವ ಸ್ಥಾನಗಳಿಗೆ ಬೀಳ್ಕೊಡಲಾಗುವುದು.

error: Content is protected !!