ಹರಿಹರ, ಮಾ,13 – ರಾಜ್ಯ ಸರ್ಕಾರದ ಆದೇಶದಂತೆ ನಗರ ವ್ಯಾಪ್ತಿಯಲ್ಲಿ ಬರುವ ವ್ಯಾಪಾರಸ್ಥರು ತಮ್ಮ ಅಂಗಡಿಯ ನಾಮ ಫಲಕಗಳಲ್ಲಿ ಶೇ. 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಆದೇಶವನ್ನು ನೀಡಿದ್ದು, ಸರ್ಕಾರದ ಆದೇಶವನ್ನು ಪಾಲಿಸದೆ ಆಂಗ್ಲ ಭಾಷೆಯಲ್ಲಿ ಹಾಕಿದ್ದ ನಾಮ ಫಲಕವನ್ನು ಇಂದು ನಗರದಲ್ಲಿ ನಗರ ಸಭೆಯ ವತಿಯಿಂದ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ಇಲಾಖೆಯ ರವಿಪ್ರಕಾಶ್ ಸಿಬ್ಬಂದಿಗಳು ಹಾಜರಿದ್ದರು.