ಮಲೇಬೆನ್ನೂರು ಪಟ್ಟಣದ ಶ್ರೀ ಬಸವೇಶ್ವರ ದೇವರ ರಥೋತ್ಸವವು ನಾಳೆ ದಿನಾಂಕ 14ರ ಗುರುವಾರ ಸಂಜೆ 4.30ಕ್ಕೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಆರ್.ರವಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 8 ಗಂಟೆಗೆ ವಿವಿಧ ಪೂಜೆ ನಂತರ ಸಣ್ಣ ಉತ್ಸವದ ಮೆರವಣಿಗೆ ಮತ್ತು ರಾತ್ರಿ 9 ಕ್ಕೆ ರಥಕ್ಕೆ ಕಳಸಾರೋಹಣ ಮಾಡಲಾಗುವುದು.
ನಾಳೆ ಗುರುವಾರ ಬೆಳಿಗ್ಗೆ 8ಕ್ಕೆ ವಿವಿಧ ಪೂಜೆಗಳ ನಂತರ ಸಣ್ಣ ಉತ್ಸವದ ಮೆರವಣಿಗೆ ಮತ್ತು 9 ಗಂಟೆಗೆ ರಥಕ್ಕೆ ತೈಲಾಭಿಷೇಕ, ಮಧ್ಯಾಹ್ನ 12 ರಿಂದ ದೇವಸ್ಥಾನದಲ್ಲಿ ದಾಸೋಹ ನಡೆಯಲಿದ್ದು, ಇದೇ ದಿನ ಸಂಜೆ 4.30ಕ್ಕೆ ಗ್ರಾಮದ ಎಲ್ಲಾ ದೇವರ ಒಡಗೂಡಿ ಶ್ರೀ ಬೀರಲಿಂಗೇಶ್ವರ ಕಾರ್ಣಿಕೋತ್ಸವದ ನಂತರ ಶ್ರೀ ಬಸವೇಶ್ವರ ದೇವರ ರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ.
ದಿನಾಂಕ 15ರ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ವಿವಿಧ ಪೂಜೆಗಳ ನಂತರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ದೇವಸ್ಥಾನದಲ್ಲಿ ಜವಳ, ದಿಂಡು ಉರುಳುಸೇವೆ ಸೇರಿದಂತೆ ಇತ್ಯಾದಿ ಸೇವೆಗಳು ನಡೆಯಲಿದ್ದು, ಸಂಜೆ 8 ಗಂಟೆಗೆ ಓಕುಳಿ ನಂತರ ದೇವರುಗಳನ್ನು ದೇವಸ್ಥಾನಗಳಿಗೆ ಬೀಳ್ಕೊಡಲಾಗುವುದು.