ಬಾಪೂಜಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಸಪ್ತಾಹ ಸಮಾರಂಭದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಪೇಜಾವರ ಅಧೋಕ್ಷಜ ಮಠ, ಉಡುಪಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಇಂದು ಬೆಳಿಗ್ಗೆ 6ರಿಂದ 7.30ರವರೆಗೆ ಸುಪ್ರಭಾತ ಪ್ರಾತಃಸ್ಮರಣೆಯನ್ನು ವಿದ್ವಾನ್ ಕೆ. ಅಪ್ಪಣ್ಣ ಆಚಾರ್ಯ, ಡಾ. ಜೆ. ಸದಾನಂದ ಶಾಸ್ತ್ರಿ ನಡೆಸಿಕೊಡಲಿದ್ದಾರೆ.
ನಂತರ ಬೆಳಿಗ್ಗೆ 7.30ಕ್ಕೆ ಭಜನೆ, 8.30 ಕ್ಕೆ ಶ್ರೀ ಪಲಿಮಾರು ಮಠದ ಸುಧಾ ವಿದ್ಯಾರ್ಥಿಗಳಿಂದ ಪ್ರವಚನ ನಡೆಯಲಿದೆ. ಬೆಳಗ್ಗೆ 9 ರಿಂದ ವಿದ್ವಾನ್ ಭೀಮಸೇನಾಚಾರ್ ಪುರೋಹಿತ್ ಅವರು ತತ್ವವಾದಕ್ಕೆ ಗುರುರಾಯರ ಕೊಡುಗೆ ಕುರಿತು ಪ್ರವಚನ ನೀಡಲಿದ್ದಾರೆ.
ಮಧ್ಯಾಹ್ನ 2.30 ರಿಂದ ಶ್ರೀ ಗುರು ಜಗನ್ನಾಥ ದಾಸರು ವಿರಚಿತ `ಕನ್ನಡ ರಾಘವೇಂದ್ರ ವಿಜಯ’ ಸಾಮೂಹಿಕ ಪಾರಾಯಣ ನಿರ್ವಹಣೆ ಇದ್ದು. ಸಂಜೆ 5 ರಿಂದ ವಿದ್ವಾನ್ ಪ್ರಾಣೇಶಾಚಾರ್ ಕಡೂರ್ ಅವರಿಂದ ದಾಸ ಸಾಹಿತ್ಯದಿಂದಾದ ಉಪಕಾರ ಕುರಿತು ಹಾಗೂ ಉಡುಪಿಯ ವಿದ್ವಾನ್ ಕುತ್ಪಾಡಿ ಕೃಷ್ಣರಾಜ ಭಟ್ಟ ಅವರಿಂದ ಕರ್ಮಣೇವಾಧಿಕಾರಸ್ತೇ ಕುರಿತು ಪ್ರವಚನ ಜರುಗಲಿದೆ.
ನಂತರ 7.15 ಕ್ಕೆ ಶ್ರೀ ರಾಘವೇಂದ್ರ ಸರ್ವಾಭಯ ಪ್ರಾರ್ಥನೆ ಬಳಿಕ ಅನುಗ್ರಹ ಸಂದೇಶವಿದೆ. ರಾತ್ರಿ 9ಕ್ಕೆ ವಿದ್ವಾನ್ ಮೈಸೂರು ರಾಮಚಂದ್ರಾಚಾರ್ಯ ಅವರಿಂದ ದಾಸವಾಣಿ ನಡೆಯಲಿದೆ.