28 ಕ್ಷೇತ್ರ ಗೆಲ್ಲಲು ಬಿಜೆಪಿ ಒಬಿಸಿ ಮೋರ್ಚಾದಿಂದ ಹಲವು ಕಾರ್ಯಕ್ರಮ

ದಾವಣಗೆರೆ, ಮಾ.11- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು 28 ಕ್ಷೇತ್ರಗಳನ್ನೂ ಗೆಲ್ಲಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ. ಅವರ ಗುರಿ ಈಡೇರಿಸಲು ಬಿಜೆಪಿ ಒಬಿಸಿ ಮೋರ್ಚಾ ಅವರೊಂ ದಿಗೆ ನಿಲ್ಲಲಿದೆ ಎಂದು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದರ ಜೊತೆಗೆ ಮತಗಳ ಅಂತರವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗ ದೊಡ್ಡ ಪಾತ್ರ ನಿರ್ವಹಿಸಲಿದೆ ಎಂದರು.

ಕಾಂಗ್ರೆಸ್ ದೇಶ ವಿದ್ರೋಹಿ ಶಕ್ತಿಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಇದಕ್ಕೆ ಇತ್ತೀಚೆಗೆ ವಿಧಾನಸಭಾ ಆವರಣದಲ್ಲಿಯೇ ಶತ್ರು ದೇಶದ ಪರ ಘೋಷಣೆ ಕೂಗಿದ ಘಟನೆಯೇ ಸಾಕ್ಷಿ ಎಂದರು. 

ಹಿಂದುಳಿದ ವರ್ಗಗಳಲ್ಲಿನ ಬಹುತೇಕ ಜಾತಿಗಳು ರಾಜಕೀಯ, ಔದ್ಯೋಗಿಕ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿ ಸಿದೆ. ಒಬಿಸಿ ಮೋರ್ಚಾದಿಂದ ಬೂತ್, ವಾರ್ಡ್ ಹಾಗೂ ಶಕ್ತಿವಾರು ಮಟ್ಟದಲ್ಲಿ ಎಲ್ಲಾ ಸಮುದಾಯ ಗಳನ್ನು ನೇರವಾಗಿ ಸಂಪರ್ಕ ಮಾಡಲಾಗುತ್ತದೆ ಎಂದರು. ಸ್ವಾಭಿಮಾನಿ ಭಾರತದ ಕಲ್ಪನೆ,‌ ಮೇಕ್ ಇನ್ ಇಂಡಿಯಾ ಹಾಗೂ ವಿಶ್ವಕರ್ಮ ಯೋಜನೆ ಎಲ್ಲವೂ ಬದುಕುಗೆ ನೆರವಾಗುವ ಯೋಜನೆಗಳಾಗಿವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ, ಈ ಬಾರಿ ಹಿಂದುಳಿದ ಸಮುದಾಯಗಳು ಮೋದಿ ಅವ ರನ್ನು ಬೆಂಬಲಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಸರ್ಕಾರದ ಯಾವುದೇ ಯೋಜನೆಗಳ ಕಾಯಕ ಸಮಾಜ, ಶ್ರಮಿಕ ವರ್ಗ ಕೇಂದ್ರೀಕರಿಸಿಯೇ ಇರುತ್ತವೆ. ಬಸವಣ್ಣನ ನಂತರ ಕಾಯಕ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ ವ್ಯಕ್ತಿ ಮೋದಿ ಮಾತ್ರ ಎಂದರು.

ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಮೋದಿ ಎಂಬ ಘೋಷಣೆಯೊಂದಿಗೆ ಸೇನಾನಿಯಂತೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. 28 ಕ್ಷೇತ್ರಗಳನ್ನು ಗೆಲ್ಲಲು ಒಬಿಸಿ ಮೋರ್ಚಾದಿಂದ ರಾಜ್ಯಾದ್ಯಂತ ವಿವಿಧ ಸಮುದಾಯಗಳನ್ನೊಳಗೊಂಡಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ರಾಜನಹಳ್ಳಿ ಶಿವಕುಮಾರ್, ಸತೀಶ್ ಬಿ.ಎಂ. ಕೊಳೇನಹಳ್ಳಿ, ಗುರುನಾಥ್, ಸೋಮಶೇಖರ್, ಸತೀಶ್ ಸೇಜವಾಡಕರ್, ಕುಬೇಂದ್ರಪ್ಪ, ರಘು ಅಂಬರ್‌ಕರ್, ಮಂಜುನಾಥ್ ಮಡಿವಾಳ, ವಿಶ್ವಾಸ್ ಇತರರಿದ್ದರು.

error: Content is protected !!