ಹರಿಹರದಲ್ಲಿ ಇಂದು ಮಾದಿಗ ಸಮಾಜದಿಂದ ಜನಜಾಗೃತಿ ಸಮಾವೇಶ, ಸಾಮೂಹಿಕ ವಿವಾಹ

ಹರಿಹರ, ಮಾ. 12-   ನಾಳೆ ದಿನಾಂಕ 13 ರ ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ಮಾದಿಗ ಸಮಾಜದ ವತಿಯಿಂದ ಮಾದಾರ ಚೆನ್ನಯ್ಯ ಜಯಂತ್ಯೋತ್ಸವದ ಅಂಗವಾಗಿ ಜನ ಜಾಗೃತಿ ಸಮಾವೇಶ ಮತ್ತು ಸರಳ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್. ಆನಂದಕುಮಾರ್  ಮತ್ತು ಉಪಾಧ್ಯಕ್ಷ ಹೆಚ್. ಶಿವಪ್ಪ ತಿಳಿಸಿದರು.

ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಹಿರಿಯೂರು ಕೋಡಿಹಳ್ಳಿ ಮಠದ ಜಗದ್ಗುರು ಶ್ರೀ ಷಡಾಕ್ಷರಿ ಮುನಿ ದೇಶಿಕೇಂದ್ರ ಸ್ವಾಮಿಗಳು,    ಕಾಗಿನಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ  ಸ್ವಾಮಿಗಳು, ವೀರಶೈವ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ  ಸ್ವಾಮಿಗಳು, ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ  ಸ್ವಾಮಿಗಳು, ಎರೆಹೊಸಳ್ಳಿ ವೇಮನ ಗುರುಪೀಠದ ಜಗದ್ಗುರು ಶ್ರೀ ವೇಮಾನಂದ  ಸ್ವಾಮಿಗಳು, ಮುಸ್ಲಿಂ ಸಮುದಾಯದ ಧರ್ಮಗುರು  ಅಲ್ ಹಜ್ ಖಾಜಿ ಶಂಶುದ್ದೀನ್ ಸಾಬ್ ಭರ್ಕಾತಿ, ಆರೋಗ್ಯ ಮಾತೆ  ಚರ್ಚ್‌ನ  ಫಾದರ್ ಕೆ.ವಿ. ಜಾರ್ಜ್ ಆಗಮಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಲಿದ್ದಾರೆ. ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಹೆಚ್. ವಿಶ್ವನಾಥ್ ಉಪನ್ಯಾಸ ಮಾಡಲಿದ್ದಾರೆ. ಮಾಂಗಲ್ಯ ವಿತರಣೆಯನ್ನು ಎಸ್.ಎಸ್.ಕೇರ್ ಟ್ರಸ್ಟ್‌ನ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಮಾಡುವರು. ಅಧ್ಯಕ್ಷತೆಯನ್ನು ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್. ಆನಂದಕುಮಾರ್ ವಹಿಸಲಿದ್ದಾರೆ.

ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ,  ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಹೆಚ್. ಆಂಜನೇಯ. ಮಾಜಿ ಸಂಸದ ಎಂ. ಚಂದ್ರಪ್ಪ ಅವರುಗಳು ಮಾದಾರ ಚೆನ್ನಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವರು.  

ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಪಿ. ಹರೀಶ್, ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕರಾದ ಎಸ್ ರಾಮಪ್ಪ, ಹೆಚ್.ಎಸ್. ಶಿವಶಂಕರ್, ಕಾಂಗ್ರೆಸ್ ಪಕ್ಷದ ಯುವ ಮುಖಂಡರುಗಳಾದ ಜಿ.ಬಿ. ವಿನಯಕುಮಾರ್,   ನಂದಿಗಾವಿ ಶ್ರೀನಿವಾಸ್, ಎ ಗೋವಿಂದ ರೆಡ್ಡಿ,  ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್  ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಎಲ್.ಬಿ. ಹನುಮಂತಪ್ಪ, ಜಿ.ಹೆಚ್. ಸಿದ್ಧಾರೂಢ, ಹನುಮಂತಪ್ಪ ದೊಡ್ಡಮನೆ, ಪಿ.ಎನ್. ವಿರುಪಾಕ್ಷಪ್ಪ, ಎಂ.ಎಸ್. ಶ್ರೀನಿವಾಸ್, ಹೆಚ್. ಶಿವಪ್ಪ, ಪರಶುರಾಮ್, ಬಿ.ಡಿ. ಬಸವರಾಜ್, ಹೆಚ್.ಎಂ. ಹನುಮಂತಪ್ಪ, ಎ.ಕೆ. ನಾಗೇಂದ್ರಪ್ಪ, ಆರ್.ಮಂಜುನಾಥ್, ಎನ್.ಕೆ. ಪ್ರಕಾಶ್, ಚೌಡಪ್ಪ ಮೇಗಳಮನೆ, ಎ.ಕೆ. ದಾನಪ್ಪ ಇತರರು ಹಾಜರಿದ್ದರು.  

error: Content is protected !!