ಎಆರ್‌ಜಿ ಕಾಲೇಜಿನ ನಕ್ಷತ್ರ ನಾಯಕ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

ಎಆರ್‌ಜಿ ಕಾಲೇಜಿನ ನಕ್ಷತ್ರ ನಾಯಕ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

ದಾವಣಗೆರೆ, ಮಾ. 12 –  ಕರ್ನಾಟಕ ರಾಜ್ಯ   ಸ್ವಿಮ್ಮಿಂಗ್  ಅಸೋಸಿಯೇಷನ್ ‌ವತಿಯಿಂದ ಬೆಂಗಳೂರಿನ ಝೀ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್‌ನ ವಿವಿಧ ವಿಭಾಗಗಳಲ್ಲಿ ಪ್ರಥಮ‌ ಸ್ಥಾನದೊಂದಿಗೆ ಮೂರು ಬಂಗಾರದ ಪದಕ ಪಡೆದಿರುವ ನಗರದ ಎ ಆರ್ ಜಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಕ್ಷತ್ರ ನಾಯಕ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

50 ಮೀಟರ್ ಪ್ರೀ ಸ್ಟೈಲ್‌, ಬ್ಯಾಕ್ ಸ್ಟ್ರೋಕ್ ಮತ್ತು 100 ಮೀಟರ್ ಬ್ಯಾಕ್ ಸ್ಟ್ರೋಕ್ ಹೀಗೆ ಮೂರು ವಿಭಾಗಗಳ 3 ಚಿನ್ನದ ಪದಕಗಳನ್ನು ನಕ್ಷತ್ರ ನಾಯ್ಕ ಗಳಿಸಿದ್ದಾರೆ.

ಈ ಮೂಲಕ ಇದೇ ದಿನಾಂಕ 29 ರಿಂದ 31 ರ ವರೆಗೆ‌‌ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ  ನಡೆಯಲಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ ಗೆ ನಕ್ಷತ್ರ ನಾಯಕ ಆಯ್ಕೆಯಾಗಿದ್ದಾರೆ.

error: Content is protected !!