ದೇವನಗರಿಯಲ್ಲಿ ಪಂಚ ದೇವರುಗಳ ಸಂಗಮ

ದೇವನಗರಿಯಲ್ಲಿ ಪಂಚ ದೇವರುಗಳ ಸಂಗಮ

ಬಾಲಾಜಿ ನಗರದಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ ಮತ್ತೊಂದು ದೇವಸ್ಥಾನ

ದೇವಸ್ಥಾನಗಳು ಮನುಷ್ಯನ ಶಾಂತಿ ಮತ್ತು ನೆಮ್ಮದಿಯ ಸ್ಥಳಗಳು. ಒಂದು ಗಾದೆಯಂತೆ  `ಸಂಕಟ ಬಂದಾಗ ವೆಂಕಟರಮಣ’ ಎಂದು, ನಮಗೆ ಏನಾದರೂ ಹೆಚ್ಚು ತೊಂದರೆ ಬಂದರೆ  ಮೊದಲು ನಾವು ದೇವರ ಮೊರೆ ಹೋಗುತ್ತೇವೆ. ದೇಹದ ಖಾಯಿಲೆಗೆ ವೈದ್ಯರು, ಮನಸ್ಸಿನ ಖಾಯಿಲೆಗೆ ದೇವರು ಬೇಕೇ  ಬೇಕು.

ಇತ್ತೀಚಿನ ದಿನಗಳಲ್ಲಿ ದೇವನಗರಿ ಎಂದೇ ಗುರುತಿಸಿಕೊಳ್ಳುತ್ತಿರುವ ದಾವಣಗೆರೆ ನಗರದಲ್ಲಿ ಇದೀಗ ಮತ್ತೊಂದು ದೇವಸ್ಥಾನದ ಉದ್ಘಾಟನೆಗೆ ಸಿದ್ಧವಾಗಿದೆ.

ಹೌದು, ಇದೊಂದು ಪಂಚ ದೇವರುಗಳ ಸಂಗಮ ಕ್ಷೇತ್ರವಾಗಲಿದೆ. ಇದುವೇ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನದಲ್ಲಿ ಗಣಪತಿ, ಆಂಜನೇಯ, ವೆಂಕಟೇಶ್ವರ ಹಾಗೂ ಈಶ್ವರನ ವಿಗ್ರಹಗಳೂ ಇರಲಿವೆ. 

ನಗರದ ಖ್ಯಾತಿ ಉದ್ಯಮಿ ಎಸ್.ಟಿ. ಕುಸುಮ ಶ್ರೇಷ್ಠಿ ಹಾಗೂ ಕುಟುಂಬ ಈ ದೇವಸ್ಥಾನ ನಿರ್ಮಾಣದ ಮೂಲ ಕಾರಣೀಭೂತರು.

ಜೀವನದಲ್ಲಿ ಏನಾದರೂ ಸಮಾಜ ಸೇವೆ ಮಾಡಬೇಕೆಂಬ ಬಯಕೆಯಿಂದ ಏನು ಮಾಡಬಹುದು ಎಂದು ಎಸ್.ಟಿ. ಕುಸುಮ ಶ್ರೇಷ್ಠಿ ಅವರು ಆಲೋಚಿಸಿದಾಗ ಅವರ ಮುಂದಿದ್ದುದು ಮೂರು ಆಯ್ಕೆಗಳು.

 

ದೇವನಗರಿಯಲ್ಲಿ ಪಂಚ ದೇವರುಗಳ ಸಂಗಮ - Janathavani

1) ದೇವಸ್ಥಾನ ಕಟ್ಟುವದು. 2) ವೃದ್ಧಾಶ್ರಮ, 3) ಶಾಲೆ (ವಿದ್ಯಾಭ್ಯಾಸ)  ಇವುಗಳಲ್ಲಿ ಆಯ್ಕೆಯಾಗಿದ್ದು ದೇವಸ್ಥಾನ.

ದೇವಸ್ಥಾನ ಕಟ್ಟಬೇಕಾದರೆ ನಿವೇಶನ ಬಹಳ ಮುಖ್ಯ. ಸರ್ಕಾರದಿಂದ ನಿವೇಶನ ಪಡೆಯಬೇಕಾದರೆ ಒಂದು ಸಂಘ ಇರಬೇಕು. ಸಂಘ ಸ್ಥಾಪಿಸಲು ಅವರು ಮೊದಲು ಭೇಟಿಯಾಗಿದ್ದು ಆರ್.ಹೆಚ್. ಅಂಡ್ ಸನ್ಸ್‌ ಮಾಲೀಕರಾದ ಆರ್.ಎಸ್. ರವೀಂದ್ರನಾಥ್‌ ಅವರನ್ನು.

ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಅವರ ಸಮ್ಮತಿಯೂ ದೊರೆಯಿತು. ಸಂಸ್ಥೆಗೆ ಅಧ್ಯಕ್ಷರಾಗಲೂ ಒಪ್ಪಿದರು.

ನಂತರ ಕುಸುಮ ಶ್ರೇಷ್ಠಿ ಅವರು ಕಾರ್ಯದರ್ಶಿಯಾಗಿಯೂ, ಸಮಾಜದ ಪ್ರಮುಖರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಹಾಗೂ ರಾಜನಹಳ್ಳಿ ರಮಾನಂದ್ ಅವರನ್ನು ಉಪಾಧ್ಯಕ್ಷರನ್ನಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಡಾ|| ಬಿ.ಎಸ್. ನಾಗಪ್ರಕಾಶ್‌, ಡಾ|| ಜಗನ್ನಾಥ್‌, ಗಂಗಪ್ಪ ಶೆಟ್ರು, ಬಿ.ಎಲ್. ಶೇಷಪ್ಪ ಶೆಟ್ರು, ಡಾ. ಕೆ.ಎಲ್. ನಾಗರಾಜ ಶೆಟ್ರು, ಬಿ.ಹೆಚ್. ಚನ್ನಪ್ಪ ಶೆಟ್ರು, ಡಾ. ಜಗನ್ನಾಥ್, ಡಾ. ಪ್ರಮೋದ್ ಶೆಟ್ರು ಸೇರಿದಂತೆ ಇನ್ನೂ ಅನೇಕ ಸಮಾಜದ ಮುಖಂಡರನ್ನು ಸಂಪರ್ಕಿಸಿದಾಗ ಆಡಳಿತ ಮಂಡಳಿಯ ಸದಸ್ಯರನ್ನೊಳಗೊಂಡ `ಆರ್ಯವೈಶ್ಯ ಮಹಾಜನ ಸಮಿತಿ’ ಎಂಬ ನಾಮದ ಅಡಿಯಲ್ಲಿ ಸಂಘ ಸ್ಥಾಪಿಸಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿದರು.

ನಗರದ ಮಂತ್ರಿಗಳಾದ ಎಸ್.ಎಸ್. ಮಲ್ಲಿಕಾರ್ಜುನ್‌ ಅವರನ್ನು ಸಂಪರ್ಕಿಸಿ ನಿವೇಶನ ಕೇಳಿಕೊಂಡಾಗ   ಭವ್ಯವಾದ ನಿವೇಶನವನ್ನು ಮಂಜೂರು ಮಾಡಿಸಿಕೊಟ್ಟರು.

ದಾವಣಗೆರೆ ನಗರವು ಬೃಹದಾಕಾರವಾಗಿ ಬೆಳೆಯತೊಡಗಿದೆ. ಇದರಂತೆ ವೈಶ್ಯ ಜನಾಂಗದ ಸಂಖ್ಯೆ ಬೆಳೆಯತೊಡಗಿದೆ. ಈ  ಹಿನ್ನೆಲೆಯಲ್ಲಿ ಇನ್ನೊಂದು ದೇವಸ್ಥಾನದ ಅವಶ್ಯಕತೆ ಇದೆ ಎಂದು ಮನಗಂಡು, ಹಳೇಪೇಟೆಯಲ್ಲಿರುವ ಒಂದು ದೇವಸ್ಥಾನ ಇದು ಆ ಭಾಗದ ಜನಗಳಿಗೆ ಮತ್ತು  ಡಿಸಿಎಂನಲ್ಲಿ ಒಂದು ದೇವಸ್ಥಾನ ನಿರ್ಮಾಣವಾಗಿ ಅದು ಇನ್ನೊಂದು ಭಾಗದ ಜನರಿಗೆ ಅನುಕೂಲವಾಯಿತು. ಹೊಸ ಊರಿನ ಜನಗಳಿಗೆ ಈ ಎರಡು ದೇವಸ್ಥಾನಗಳು ಬಹಳ ದೂರವಾಗಿದ್ದು,  ಇನ್ನೊಂದು ದೇವಸ್ಥಾನದ ಅವಶ್ಯಕತೆಯನ್ನು ಕಂಡು, ಬಾಲಾಜಿ ನಗರ, ಕುಂದುವಾಡ ಕೆರೆಯ ಪಕ್ಕ ದೇವಸ್ಥಾನ ಕಟ್ಟಲು ನಿರ್ಧರಿಸಲಾಯಿತು.

ಇದೀಗ ಕುಸುಮ ಶ್ರೇಷ್ಠಿ ಅವರ ಆಶಯದಂತೆ ಭವ್ಯಕಟ್ಟಡ ನಿರ್ಮಾಣವಾಗಿದೆ. ಇದರ ಪ್ರಾಣ ಪ್ರತಿಷ್ಠಾಪನೆಯು ಮಾರ್ಚ್‌ 13ರಂದು ನಡೆಯಲಿದೆ.

error: Content is protected !!