ಹಿರಿಯರ ಮಾರ್ಗದರ್ಶನದಲ್ಲಿ ಬಡತನದಲ್ಲಿನ ಸಮಾಜ ಬೆಳೆಸಿ : ಸಚಿವ ಎಸ್ಸೆಸ್ಸೆಂ ಸಲಹೆ

ಹಿರಿಯರ ಮಾರ್ಗದರ್ಶನದಲ್ಲಿ ಬಡತನದಲ್ಲಿನ ಸಮಾಜ ಬೆಳೆಸಿ : ಸಚಿವ ಎಸ್ಸೆಸ್ಸೆಂ ಸಲಹೆ

ಪಿಂಜಾರ್ ಸಮಾಜದ ಕ್ಯಾಟಗರಿ-1 ಪ್ರಮಾಣ ಪತ್ರ ವಿತರಣಾ ವಿಳಂಬಕ್ಕೆ ಸಂಬಂಧಿಸಿದಂತೆ, ಭಾಷಣದ ವೇಳೆಯೇ ತಹಶೀಲ್ದಾರ್ ಬಳಿ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚಿಸಿದರು.

ದಾವಣಗೆರೆ, ಮಾ.10 – ಹಿರಿಯರ ಮಾರ್ಗದರ್ಶನದಲ್ಲಿ, ಯುವಕರು ಸಂಘದ ವತಿಯಿಂದ ಬಡತನದಲ್ಲಿರುವ ಸಮಾಜವನ್ನು ಬೆಳಸುವಂತೆ ಪಿಂಜಾರ್ ಸಮಾಜದ ಯುವಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಿವಿಮಾತು ಹೇಳಿದರು.

ನಗರದ ಪಿಂಜಾರ ಸಮಾಜದ ಸೌಹಾರ್ಧ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡತನದಲ್ಲಿರುವ ನದಾಫ್/ ಪಿಂಜಾರ್ ಸಮಾಜ ಇನ್ನೂ ಅಭಿವೃದ್ಧಿ ಆಗಬೇಕಿದೆ. ಈ ಸಮಾ ಜಕ್ಕೂ ನಮ್ಮ ಮನೆತನಕ್ಕೂ ಉತ್ತಮ ಒಡನಾಟವಿದೆ ಎಂದ ಅವರು, ಈ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮಾಡಿದ್ದೇನೆ ಎಂದರು.

ಹಬ್ಬ ಹರಿದಿನಗಳಲ್ಲಿ ಎಲ್ಲರೂ ಅನ್ಯೋನ್ಯತೆ ಯಿಂದ ಇದ್ದೇವೆ, ಇಂದಿನ ದಿನಗಳಲ್ಲಿ ಇದಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಆದರೆ ನಾವು ಇರುವರೆಗೂ ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಸಚಿವರು ಹೇಳಿದರು.

ಜಿಲ್ಲೆಯ ಎಲ್ಲ ಬಡ ಸಮುದಾಯಗಳಿಗೆ ಸರ್ಕಾರದ ವತಿಯಿಂದ ಅನುದಾನ ಕೊಡಿಸಿದ್ದೇವೆ. ಇದರಲ್ಲಿ ಪಿಂಜಾರ ಸಮುದಾಯಕ್ಕೂ ಸಹ 1ರೂಪಾಯಿ ಚದರ ಅಡಿಯಂತೆ ಜಾಗ ಕಲ್ಪಿಸಿದ್ದೇವೆ ಜತೆಗೆ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂದು ತಿಳಿಸಿದರು.

ಮಾಯಕೊಂಡ ಶಾಸಕ ಕೆ.ಬಸವಂತಪ್ಪ ಮಾತನಾಡಿ, ಮುಸ್ಲಿಂ ಸಮುದಾಯದಲ್ಲೇ ಅತೀ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರ ಜತೆ ಕೈ ಜೋಡಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಈ ಸಮುದಾಯದ ಸಾಧಕರಾಗಿರುವ ಇಮಾಮ್ ಮೇಷ್ಟ್ರು, ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ, ಇದರಲ್ಲಿ ನಾನು ಒಬ್ಬ ಎಂದು ತಮ್ಮ ಬಾಲ್ಯದ ಶಾಲಾ ದಿನಗಳ ಕುರಿತು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಹೆಚ್ಚಿನ ಮಹತ್ವ ಕೊಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ಒಗ್ಗಟ್ಟಾಗಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ನದಾಫ್-ಪಿಂಜಾರ್ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಡಿ. ನದಾಫ್ ಮಾತನಾಡಿ, ಪಿಂಜಾರ ಸಮುದಾಯವನ್ನು ಅಲ್ಪಸಂಖ್ಯಾತರ ಪಟ್ಟಿಗಾದರೂ ಸೇರಿಸಿ ಇಲ್ಲವೆ ಕ್ಯಾಟಗರಿ-1ರ ಪಟ್ಟಿಗೆ ಸೇರಿಸಬೇಕು ಆಗ್ರಹಿಸಿದರು.

ಬಡತನದಲ್ಲಿರುವ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಬೇಕು ಮತ್ತು ರಾಜಕೀಯವಾಗಿ ಅವಕಾಶ ಕಲ್ಪಿಸಬೇಕು ಎಂದು ವಿವಿಧ ಹಕ್ಕೋತ್ತಾಯ ಮಂಡಿಸಿದರು.

ಇದೇ ವೇಳೆ ಜಿಲ್ಲಾ ಮತ್ತು ತಾಲ್ಲೂಕಿನ ಪುರುಷ ಹಾಗೂ ಮಹಿಳಾ ಘಟಕದ 2024-29ರ ಅವಧಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಮತ್ತು ಸದಸ್ಯರ ಪದಗ್ರಹಣ ನಡೆಯಿತು.

ಈ ವೇಳೆ ಭಾವೈಕ್ಯ ಗುರುಪೀಠದ ಸಂಗಮ್ ಪೀರ್ ಜಸ್ತಿ, ಸಂಘದ ರಾಜ್ಯಧ್ಯಕ್ಷ ಎಚ್. ಜಲೀಲ್ ಸಾಬ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ ನಾಗ್ತೆ, ವಿಭಾಗೀಯ ಉಪಾಧ್ಯಕ್ಷ ಡಿ.ಬಿ. ಹಸನ್ಪೀರ್, ನಿವೃತ್ತ ಪ್ರಚಾರ್ಯ ಇಮಾಮ್, ಡಿ. ಖಾದರ್ ಬಾಷಾ, ನೂರ್‍ಜಾನ್ ಬೇಗಂ, ಸಮಾಜದ ಮುಖಂಡ ಚಮನ್ ಸಾಬ್ ಪ್ರಮುಖರು ಇದ್ದರು.

error: Content is protected !!