ಸಶಕ್ತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಬಹುಮುಖ್ಯ

ಸಶಕ್ತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಬಹುಮುಖ್ಯ

ದಾವಣಗೆರೆ, ಮಾ.10- ಶಾರದಾ ಐಐಟಿ ಮತ್ತು ಮೆಡಿಕಲ್ ಅಕಾಡೆಮಿಯ ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಜೂಷಾ ಸೈಮನ್ ಅವರು, ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಶೋಷಣೆ ನಿಲ್ಲಬೇಕು ಮತ್ತು ಸಶಕ್ತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.

ಮಹಿಳೆಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಾಚಾರ್ಯ ಡಾ.ಅನಿಲ್ ಕುಮಾರ್ ಶ್ಯಾಗಲೆ ತಿಳಿಸಿದರು.

“ಮಹಿಳಾ ಶಕ್ತಿ” ಎಂಬ ಕವನ ರಚನೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಡಿ.ಎಸ್. ಸಾನಿಯಾ ಎಂಬ ವಿದ್ಯಾರ್ಥಿನಿಗೆ ಸನ್ಮಾನಿಸಿದರು.

ಪ್ರಕೃತಿ, ಮಂಜುಳಾ, ಅಮೂಲ್ಯ, ಲಕ್ಷ್ಮಿ ಎಂಬ ವಿದ್ಯಾರ್ಥಿನಿಯರು ಮಹಿಳಾ ಸಾಧಕಿಯರ ಕುರಿತು ಭಾಷಣ ಮಾಡಿದರು.

ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಪೂರ್ವ ನಿರೂಪಿಸಿದರು. ಎಂ.ಎಲ್. ಸಹನಾ ವಂದಿಸಿದರು.

ಹಿರಿಯ ಉಪನ್ಯಾಸಕಿ ಎಸ್. ಲೀನಾ, ಮಹಿಳಾ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಇದ್ದರು‌.

error: Content is protected !!