ನಗರದಲ್ಲಿ ಇಂದು ನೃತ್ಯ ಸಮರ್ಪಣಾ ಭರತನಾಟ್ಯ ಕಾರ್ಯಕ್ರಮ

ಈಶ್ವರಮ್ಮ  ಶಾಲೆಯಲ್ಲಿ ಇಂದು ಸಂಜೆ 5ಕ್ಕೆ ದಿ|| ರುಕ್ಮಿಣಿದೇವಿ ಅರುಂಡೇಲ್‌ ಅವರ ಸಂಸ್ಮರಣೆ ಅಂಗವಾಗಿ ನೃತ್ಯ ಸಮರ್ಪಣ-2024 ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ವತಿಯಿಂದ ಈಶ್ವರಮ್ಮ ಟ್ರಸ್ಟ್‌ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್‌. ಸುಜಾತ ಕೃಷ್ಣ, ಈಶ್ವರಮ್ಮ ಟ್ರಸ್ಟ್‌ನ ಅಧ್ಯಕ್ಷೆ ಎ.ಆರ್. ಉಷಾ ರಂಗನಾಥ್‌, ಡಾ. ಎಂ.ಸಿ. ಶಶಿಕಾಂತ್‌, ಡಾ. ರೂಪಾಶ್ರೀ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಬಿ. ಸಹನ ಅವರಿಗೆ ನರ್ತನ ಸಿರಿ ಪುರಸ್ಕಾರ ಸೇರಿದಂತೆ ಹಲವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.

ವರ್ತಕ ಬಸವರಾಜ್ ಬನ್ನಟ್ಟಿ ಹಾಗೂ ರೇಣುಕಾ ಬಸವರಾಜ್ ಅವರ ಪುತ್ರಿ ಬಿ. ಸಹನ 16 ವರ್ಷಗಳಿಂದ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆಯಲ್ಲಿ ನೃತ್ಯ ಗುರು ಪೂರ್ಣಿಮಾ ಭಾಗವತರಲ್ಲಿ ನೃತ್ಯ ಕಲಿತು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, ನಾಡಿನ ವಿವಿಧೆಡೆ ಗುರುಗಳೊಂದಿಗೆ ಕಾರ್ಯಕ್ರಮ ನೀಡಿದ್ದಾರೆ. ಪ್ರಸಕ್ತ ಎಸ್ಎಸ್ಎನ್‌ಪಿಎಸ್‌ ಶಾಲೆಯಲ್ಲಿ ಜೀವಶಾಸ್ತ್ರ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಸಂಜೆ  `ನರ್ತನ ಸಿರಿ’ ಪುರಸ್ಕಾರ ಸ್ವೀಕರಿಸಲಿದ್ದಾರೆ.

error: Content is protected !!