ದಾವಣಗೆರೆ, ಮಾ. 8 – ನಗರದ ಬಿಐಇಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಗಂಗಾಧರಪ್ಪ ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ನೀಡಿದೆ.
ಫ್ಯಾಕಲ್ಟಿ ಆಫ್ ಕಂಪ್ಯೂಟರ್ ಅಂಡ್ ಇನ್ಫಾರ್ಮೇಷನ್ ಸೈನ್ಸ್ ವಿಭಾಗದಲ್ಲಿ ಡೆವಲಪ್ಮೆಂಟ್ ಆಫ್ ಪ್ಯಾಟರ್ನ್ ರೆಕಗ್ನಿಷನ್ ಸಿಸ್ಟಂ ಫಾರ್ ಅನಾಲಿಸಿಸ್ ಅಂಡ್ ಗ್ರೇಡಿಂಗ್ ಆಫ್ ಬ್ರೈನ್ ಟ್ಯೂಮರ್ ಎಂಬ ವಿಷಯವಾಗಿ ಗಂಗಾಧರಪ್ಪ ಅವರು ಮಂಡಿಸಿದ್ದ ಮಹಾ ಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ.