ಭದ್ರಕಾಳಿ ಸಹಿತ ಶ್ರೀ ವೀರಭದ್ರೇಶ್ವರ ದೇವ ಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ಸಂಜೆ 6.30 ರಿಂದ ವೇ. ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಪೂಜೆ ನೆರವೇರಲಿದ್ದು, ನಂತರ ಶ್ರೀ ವೀರಭದ್ರೇಶ್ವರ ಗುರುಕುಲ ಮಾತೆಯವರಿಂದ ರುದ್ರ ಪಾರಾಯಣ ನಡೆಯಲಿದೆ.
ರಾತ್ರಿ 9 ಗಂಟೆಯಿಂದ ಉಡುಪಿಯ ಕಲಾ ಸಿಂಧು ಸುಗಮ ಸಂಗೀತ ತಂಡದಿಂದ ಮತ್ತು ಜಾನ ಪದ ಗಾಯಕರಾದ ಶ್ರೀಮತಿ ಕಲಾವತಿ ದಯಾನಂದ ಇವರಿಂದ ಸಂಗೀತ ಭಕ್ತಿ ಗಾಯನದ ಮೂಲಕ ಶಿವರಾತ್ರಿ ಜಾಗರಣೆ ಏರ್ಪಡಿ ಸಲಾಗಿದೆ ಎಂದು ದೇವಸ್ಥಾನದ ಉಪಾಧ್ಯಕ್ಷ ಬಿ. ಚಿದಾನಂದಪ್ಪ ತಿಳಿಸಿದ್ದಾರೆ.