ಹರಪನಹಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ
ಹರಪನಹಳ್ಳಿ, ಮಾ. 6 – ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಇವರ ನಿರ್ದೇಶನದಂತೆ ಇದೇ ದಿನಾಂಕ 9 ರಂದು ನಡೆಯ ಬೇಕಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ತನ್ನು ಇದೇ ದಿನಾಂಕ 16 ಕ್ಕೆ ಮುಂದೂ ಡಲಾಗಿದ್ದು, ಸಾರ್ವಜನಿ ಕರು, ಕಕ್ಷಿದಾರರು ಹಾಗೂ ವಕೀಲರುಗಳು ಸಹಕರಿಸ ಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದ ತಮ್ಮ ಕಚೇರಿ ಯಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್ತನ್ನು ರಾಜೀಯಾಗಬ ಹುದಾದ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕ ರಣಗಳಾದ ಪಾಲು ವಿಭಾಗ, ಮೋಟರ್ ವಾಹನ ಅಪಘಾತ ಪರಿಹಾರ ವ್ಯಾಜ್ಯಗಳು, ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿಯಾ ಗಬಹು ದಾದ ಇತ್ಯರ್ಥಪಡಿಸಿ ಕೊಳ್ಳಲು ಅವಕಾಶ ಇದೆ. ಹರಪನ ಹಳ್ಳಿಯ ಉಭಯ ನ್ಯಾಯಾಲಯಗಳಲ್ಲಿ ಡೆಯುವ ಲೋಕ ಅದಾಲತ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜಿಯಾಗ ಬ ಹುದಾದ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಈ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.