ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವ ಅದೇಶಕ್ಕೆ ಎಐಡಿಎಸ್‌ಓ ಖಂಡನೆ

ದಾವಣಗೆರೆ, ಮಾ. 6-  5, 8 ಹಾಗೂ 9 ನೇ ತರಗತಿಗಳ  ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕು ಎಂಬ ಸರ್ಕಾರದ  ಆದೇಶವನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸುತ್ತದೆ. ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.

5, 8 ಹಾಗೂ 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ವಿದ್ಯಾರ್ಥಿ ವಿರೋಧಿಯಾಗಿದೆ. ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳ ಮೂಲಕವೇ ತರಿಸುವಂತಹ ಆದೇಶಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಉದಾತ್ತ ಆಶಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಬಡ ಮಕ್ಕಳ ಮೇಲೆ ಈ ತರಹ ಯಾವುದೇ ರೀತಿಯ ಹೊರೆಯನ್ನು ಹೇರದೇ, ಈ ಕೂಡಲೇ ಈ ಆದೇಶವನ್ನು ಹಿಂಪಡೆಯ ಬೇಕೆಂದು ಕಾಮತ್ ಒತ್ತಾಯಿಸಿದ್ದಾರೆ. 

error: Content is protected !!