ದಾವಣಗೆರೆ, ಮಾ. 5 – ಜಿಲ್ಲಾ ಅಮೆಚೂರ ಕಬ್ಬಡ್ಡಿ ಸಂಸ್ಥೆ ಹಾಗೂ ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ಜಿಲ್ಲಾ ಮಟ್ಟದ ಕಬ್ಬಡ್ಡಿ ಪ್ರಿಮಿಯರ್ ಲೀಗ್ (JKPL)-24 ಇದರ ಪ್ರಯುಕ್ತ 8 ತಂಡಗಳಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು.
ದಿನೇಶ್ ಕೆ.ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಪಂದ್ಯಾವಳಿಯ ಸಂಘಟಕ ಜಯಪ್ರಕಾಶ್ ಗೌಡ ಜೆ.ಪಿ. ಇವರ ಅಧ್ಯಕ್ಷತೆಯಲ್ಲಿ ಹರಾಜು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜು ರೆಡ್ಡಿ, ಶಿವಗಂಗಾ ಶ್ರೀನಿವಾಸ್, ಕುರುಡಿ ಗಿರೀಶ್ ಲೀಲಾ, ಎಂ. ದೊಡ್ಡಪ್ಪ, ಹೆಚ್. ನಿಜಗುಣ, ಎಂ .ನಾಗರಾಜ, ಹೆಚ್. ಚಂದ್ರು ಉಪಸ್ಥಿತರಿದ್ದರು.