ಹರಪನಹಳ್ಳಿ ಮಾ. 5- ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಕೆ.ಲಕ್ಷ್ಮಣ್ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ನೇಮಕ ಗೊಳಿಸಿ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆಯ ಮೇರೆಗೆ ಪದಾಧಿಕಾರಿ ಘೋಷಣೆ ಮಾಡಿದ್ದು, ಮಂಡಲ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಾವಿಹಳ್ಳಿ ಎ. ಉದಯಕುಮಾರ್ ಮತ್ತು ವೊಡ್ಡಿನ ದಾದಾಪುರದ ಯು.ಎನ್.ಪ್ರವೀಣ್ ಅವರನ್ನು ನೇಮಿಸಲಾಗಿದೆ.
ಹರಪನಹಳ್ಳಿ ತಾಲ್ಲೂಕು ಬಿಜೆಪಿಗೆ ನೇಮಕ
