ಮಲೇಬೆನ್ನೂರು, ಮಾ.4- ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಏಕನಾಥೇಶ್ವರಿ, ಶ್ರೀ ಕೋಡಿ ಮಾರೇಶ್ವರಿ, ಶ್ರೀ ದುರ್ಗಮ್ಮ ಜಾತ್ರೋತ್ಸವಕ್ಕೆ ಭಾನುವಾರ ಹರಳಹಳ್ಳಿ ರಸ್ತೆಯ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಳಿ ಹಂದರಕಂಬ ಪೂಜೆ ನೆರವೇರಿಸುವುದರೊಂದಿಗೆ ಜಾತ್ರೆಗೆ ಚಾಲನೆ ನೀಡಲಾಯಿತು.
ಇದೇ ದಿನಾಂಕ 19 ರಿಂದ 22 ರವರೆಗೆ 4 ದಿನಗಳ ಕಾಲ ಅಮ್ಮನ ಹಬ್ಬ ಅದ್ಧೂರಿಯಾಗಿ ನಡೆಯಲಿದೆ ಎಂದು ಕೆ.ಜಿ.ಪರಮೇಶ್ವರಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅರ್ಚಕ ಪ್ರಕಾಶ್, ಓ.ಜಿ. ಶಿವಕುಮಾರ್, ಓ.ಜಿ. ರೇವಣಸಿದ್ದಪ್ಪ, ಸಿರಿಗೆರೆ ರಂಗನಾಥ್, ಉಡೇದರ ರೇವಣಸಿದ್ದಪ್ಪ, ಎ.ಕೆ. ನರಸಿಂಹಪ್ಪ, ಓ.ಜಿ. ವಿಜಯ್, ಬಿ. ಮಂಜುನಾಥ್, ಹೊಳಿಯಪ್ಪ ಈ ವೇಳೆ ಹಾಜರಿದ್ದರು.