ಹರಪನಹಳ್ಳಿ, ಮಾ. 4- ಬಿದ್ದ ಹನುಮಪ್ಪನಮಟ್ಟಿಯ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ ಮತ್ತು ಕೆ. ಬೇವಿನಹಳ್ಳಿ ಗ್ರಾಮಸ್ಥರ ವತಿಯಿಂದ ಕೊಟ್ಟೂರಿಗೆ ಹೋಗುವ ಪಾದಯಾತ್ರಿಗಳಿಗೆ ಉಪಹಾರ, ಪಾನಕ ಮತ್ತು ಮಜ್ಜಿಗೆ ಸೇರಿದಂತೆ ಪ್ರಸಾದ ವಿತರಿಸಿದರು.
ಕಂಚಿಕೆರೆ-ಅರಸಿಕೆರೆ ಮಾರ್ಗವಾಗಿ ಹೋಗುವ ಪಾದಯಾತ್ರಿ ಕರು ಶ್ರೀಕ್ಷೇತ್ರ ಬಿದ್ದ ಹನುಮಪ್ಪನಮಟ್ಟಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಸಾದ ಸೇವಿಸಿ ಕೆಲಹೊತ್ತು ವಿಶ್ರಾಂತಿ ಪಡೆದು ಯಾತ್ರೆ ಮುಂದುವರೆಸುತ್ತಿದ್ದರು.
ಈ ವೇಳೆ ಕೆ.ಬೇವಿನಹಳ್ಳಿ ಗ್ರಾಮದ ಜಿ.ಎಸ್. ಮಹೇಶ್ವರಪ್ಪ ಗೌಡ್ರು, ಅವರ ಕುಟುಂಬ ಮತ್ತು ಗ್ರಾಮಸ್ಥರು, ಶ್ರದ್ಧಾ ಭಕ್ತಿಯಿಂದ ದಾಸೋಹ ಸೇವೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತಿಯೇ ಮುಕ್ತಿಗೆ ಕಾರಣ. ನಿಮ್ಮಲ್ಲಿರುವ ಅಪಾರ ಭಕ್ತಿ-ನಂಬಿಕೆ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ಬಸವರಾಜ ಶ್ರೀಗಳು ಆಶೀರ್ವಚನ ನುಡಿದರು. ಸಂಗಪ್ಪ ತೋಟದ ಶಾಮನೂರು, ಬಿ. ಬಸವರಾಜ ಕಂಚಿಕೆರೆ, ಕೆ.ಎಂ. ಮಹೇಶಪ್ಪ, ಪಾಟೀಲ್ ಕೆಂಚನಗೌಡರು, ದುದ್ದುಗಾರ ಬಸವರಾಜಪ್ಪ, ಬಾರಿಕರ ಮಂಜಣ್ಣ, ಕೆ.ಬಿ. ಬಸವರಾಜಪ್ಪ, ಮಹಾದೇವಮ್ಮ ಮಲ್ಲಿಕಾರ್ಜುನಪ್ಪ, ಪ್ರಕಾಶ್ ಹೊಸಮನಿ ಇತರರು ಇದ್ದರು.