ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘಕ್ಕೆ 21 ಸದಸ್ಯರ ಅವಿರೋಧ ಆಯ್ಕೆ

ದಾವಣಗೆರೆ, ಮಾ. 4- ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ 21 ಸದಸ್ಯರನ್ನು ಸಮಾಜದ ಮುಖಂಡರುಗಳ ನೇತೃತ್ವದಲ್ಲಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 

ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಉಳಿಕೆ ಅಭ್ಯರ್ಥಿಗಳ 21 ಸದಸ್ಯರುಗಳನ್ನು  ಚುನಾವಣಾಧಿ ಕಾರಿಗಳಾದ ಬಸವರಾಜ್ ರಾಮಗೊಂಡನಹಳ್ಳಿ ತಿಳಿಸಿದ್ದಾರೆ.  

ಎಂ.ಬಿ. ದ್ಯಾಮಣ್ಣ ಯಕ್ಕನಹಳ್ಳಿ. ದೇವಿಕುಮಾರ್ ತಿಮ್ಮೇನಹಳ್ಳಿ, ಜಗನ್ನಾಥ್ ಡಿ.ಜೆ. ತಣಿಗೆರೆ, ರವಿ ಕೆ.ಬಿ. ಬಸವಾಪಟ್ಟಣ, ಜಿ.ಕೆ. ಸುರೇಶ್ ಹರಿಹರ, ರೇವಣಸಿದ್ದಪ್ಪ ಗಂಗನರಸಿ, ಬಿ. ಮಲ್ಲೇಶಪ್ಪ ಕಮಲಾಪುರ, ಎಲ್.ಬಿ. ಭೈರೇಶ್ ಜಗಳೂರು, ಎ. ಮಂಜುನಾಥ ಕೊಕ್ಕನೂರು, ಭಗತ್ ಸಿಂಹ ಚಿಕ್ಕಬೂದಿಹಾಳ, ಎಸ್. ವೆಂಕಟೇಶ್ ಮಾಯಕೊಂಡ, ಬಿ. ಷಣ್ಮುಖಪ್ಪ ಮಳಲ್ಕೆರೆ, 

ಟಿ.ಬಿ. ಮೂರ್ತಿ ಲೋಕಿಕೆರೆ, ವೈ. ವಿರೂಪಾಕ್ಷಪ್ಪ ಜಡಗನಹಳ್ಳಿ, ಜಿ.ವಿ. ಮಾಲತೇಶ್ ಹದಡಿ, ಟಿ.ಟಿ. ಅವಿನಾಶ್ ದಾವಣಗೆರೆ ನಗರ, ಎಚ್‌.ಜಿ. ಗಣೇಶಪ್ಪ ಹೊಸ ಕುಂದುವಾಡ, ಆರ್. ರಮೇಶ್ ದಾವಣಗೆರೆ, ಎಂ.ಸಿ. ರವಿ ದಾವಣಗೆರೆ, ವೈ. ಮಂಜುನಾಥ್ ದಾವಣಗೆರೆ, ದೀಪಕ್ ಬಿ. ಜೋಗಪ್ಪನವರ್ ದಾವಣಗೆರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಇದೇ ದಿನಾಂಕ 15 ರಂದು ಚುನಾವಣೆ ನಡೆಯಬೇಕಾಗಿತ್ತು. ಚುನಾವಣೆ ದಿನಾಂಕ
ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಸಮಾಜದ ಹಿರಿಯರ ನೇತೃತ್ವದಲ್ಲಿ ಚುನಾವಣೆ ಇಲ್ಲದೇ ಅವಿರತವಾಗಿ 21 ಸದಸ್ಯರುಗಳ ಮುಂದಿನ ಮೂರು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

error: Content is protected !!