ಮಲೇಬೆನ್ನೂರು, ಮಾ. 4- ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಮೈಲಾರ ಲಿಂಗೇಶ್ವರ ಶಿಬಾರಕಟ್ಟೆ ಸೇವಾ ಸಮಿತಿ ಆಶ್ರಯದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಗಂಗಮಾಳಮ್ಮ ದೇವರುಗಳ ಪ್ರಾಣ ಪ್ರತಿಷ್ಠಾಪನೆಯಾಗಿ 14 ವರ್ಷಗಳು ತುಂಬಿದ ಪ್ರಯುಕ್ತ ಮೈಲಾರಲಿಂಗೇಶ್ವರ ಸ್ವಾಮಿಯ ಪರವು ಭಾನುವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಗಂಗಾಪೂಜೆ, ಭಂಡಾರ ಅರ್ಚನೆ, ಅಭಿಷೇಕ, ಮಹಾ ಮಂಗಳಾರತಿ, ಚಾಟಿ ಸೇವೆ, ಪವಾಡ, ಗೊರವಯ್ಯ ಮತ್ತು ಗೊರವಮ್ಮ ನವರಿಗೆ ಪಡ್ಲಿಗೆ ತುಂಬಿಸುವ ಕಾರ್ಯ ನೆರವೇರಿತು. ಚಾಟಿ ಗೊರವಯ್ಯನವರಿಂದ ಚಾಟಿ ಸೇವೆ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮೈಲಾರಲಿಂಗೇಶ್ವರ ಸ್ವಾಮಿಯ ಪರವು
