ಸೋಮಪ್ಪ ಹಿರೇಗೋಣಿಗೆರೆ ಗ್ರಾ.ಪಂ. ಅಧ್ಯಕ್ಷ

ಸೋಮಪ್ಪ ಹಿರೇಗೋಣಿಗೆರೆ ಗ್ರಾ.ಪಂ. ಅಧ್ಯಕ್ಷ

ಹೊನ್ನಾಳಿ, ಫೆ.29- ತಾಲ್ಲೂಕಿನ ಹಿರೇ ಗೋಣಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೋಮಪ್ಪ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಗಪ್ಪನವರ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದ್ದು, ಚುನಾವಣಾಧಿಕಾರಿಯಾಗಿ ಸಾಸ್ವೆಹಳ್ಳಿ ಎಇಇ ರಾಜ ಕುಮಾರ್ ಕಾರ್ಯ ನಿರ್ವಹಿಸಿದರು.

ಸದಸ್ಯರಾದ ರವಿಕುಮಾರ್, ಬಸವಣ್ಯೆಪ್ಪ, ಹನುಮಂತಪ್ಪ, ನಾಗರಾಜ, ಮಂಜಪ್ಪ, ಮಹಿಳಾ ಸದಸ್ಯರಾದ ಗೀತಮ್ಮ, ಅನಿತ, ಮಧು, ಗಿರಿಜಮ್ಮ, ಜ್ಯೋತಿ, ನಸ್ರೀನ್, ಲಲಿತಾಬಾಯಿ, ಮಂಜಮ್ಮ, ನಾಗರತ್ನ, ಶಮೀನಾಬಾನು, ಅಭಿವೃದ್ಧಿ ಅಧಿಕಾರಿ ಅರುಣಗೌಡ ಉಪಸ್ಥಿತರಿದ್ದರು. 

error: Content is protected !!