ಇಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ `ಐಸಿರಿ’ ಉದ್ಘಾಟನೆ

ಇಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ `ಐಸಿರಿ’ ಉದ್ಘಾಟನೆ

 ಹುಬ್ಬಳ್ಳಿಯ ಹೊಸೂರು – ಉಣಕಲ್ ಬೈಪಾಸ್ ರಸ್ತೆಯಲ್ಲಿ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ `ಐಸಿರಿ’ ಕಣ್ಣಿನ ಆಸ್ಪತ್ರೆಯು ಇಂದು ಸಂಜೆ 4.45ಕ್ಕೆ ಉದ್ಘಾಟನೆಯಾಗಲಿದೆ.

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯ ಕೋರ್ಟ್ ಸಂಕೀರ್ಣ ಸಮೀಪವಿರುವ ಶ್ರೀ ದುರ್ಗಾ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ.

ಐಸಿರಿ ಕಣ್ಣಿನ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನದ ರಿಫ್ರಾಕ್ಟಿವ್ ಸರ್ಜರಿ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ವಿನೂತನ -28 ವಿಧಾನ ಹೊಂದಿದೆ. ರೋಬೋಟಿಕ್ ತಂತ್ರಜ್ಞಾನದ ಫೆಮ್ಟೊಸೆಕೆಂಡ್ ಲೇಸರ್‌ನಿಂದ ಲೆನ್ಸ್‌ಎಸ್‌ಎಕ್ಸ್‌ ಶಸ್ತ್ರ ಚಿಕಿತ್ಸೆ ಸೌಲಭ್ಯವಿದೆ. ಕನ್ನಡಕದ ನಂಬರ್ ನಿವಾರಿ ಸಲು ಆಧುನಿಕ ಎಕ್ಸ್‌ಸೈಮರ್ ಲೇಸರ್ ಹೊಂದಿದ ಶ್ವಿಂಡ್ ಅಮಾರಿ ಸ್‌ನಿಂದ ಲೇಸರ್‌ ಚಿಕಿತ್ಸೆ ಹಾಗೂ ಅಕ್ಷಿಪಟಲದ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಡಿಜಿಟಲ್ 3ಡಿ ತಂತ್ರಜ್ಞಾನದ ಜಿನ್ಯೂಟಿ ವ್ಯವಸ್ಥೆಗಳು ಲಭ್ಯವಿವೆ ಎಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!