ಮೂರು ದಿನಗಳ ಮಹಿಳಾ ಪ್ರಧಾನ ನಾಟಕೋತ್ಸವ

ಮೂರು ದಿನಗಳ ಮಹಿಳಾ ಪ್ರಧಾನ ನಾಟಕೋತ್ಸವ

ದಾವಣಗೆರೆಮ ಫೆ. 27 – ವೃತ್ತಿ  ರಂಗಭೂಮಿ ರಂಗಾಯಣ (ದಾವಣಗೆರೆ) ವತಿಯಿಂದ ಮೂರು ದಿನಗಳ ಮಹಿಳಾ ಪ್ರಧಾನ ನಾಟಕೋತ್ಸವದ ಪ್ರಯುಕ್ತ ಪ್ರಥಮ ದಿನ `ತಾಯಿ ಕರುಳು’ ನಾಟಕ ಪ್ರದರ್ಶನವು ನಗರದ ಶ್ರೀ ಶಿವಯೋಗ ಮಂದಿರದಲ್ಲಿ ಇಂದು ನಡೆಯಿತು. 

ಶ್ರೀ ಬಸವಪ್ರಭು ಸ್ವಾಮೀಜಿಯವರು ಹಾರ್ಮೋನಿಯಂ ನುಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ಹಿರಿಯ ಕಲಾವಿದ ಐರಣಿ ಬಸಬರಾಜ್, ಬಸವಕಲಾ ಲೋಕದ ಶಶಿಧರ ಬಸಾಪುರ ಹಲವು ಹಿರಿಯ ಕಲಾವಿದರು ಉಪಸ್ಥಿತರಿದ್ದರು.

ನಾಳೆ ಬುಧವಾರ ಭಕ್ತಿ ಪ್ರಧಾನ ನಾಟಕ ಹೇಮರೆಡ್ಡಿ ಮಲ್ಲಮ್ಮ ಮತ್ತು ನಾಡಿದ್ದು `ಮಗ ಹೋದರು ಮಾಂಗಲ್ಯ ಬೇಕು’ ನಾಟಕ ಪ್ರದ ರ್ಶನವಿದ್ದು ಎಲ್ಲರೂ ನೋಡಿ ಆನಂದಿಸಬೇಕು ಎಂದು ಹೇಳಿ ನಾಟಕಕ್ಕೆ ಶುಭಾಶಯ ಕೋರಿದರು.

ರಂಗಭೂಮಿಯ ಹಿರಿಯ ಕಲಾವಿದರಾದ ಶ್ರೀಮತಿ ಮಂಜಮ್ಮ, ವೀರಯ್ಯಸ್ವಾಮಿ ಮತ್ತು ತಂತ್ರಜ್ಞ ತಿಪ್ಪೇಸ್ವಾಮಿ ಮತ್ತು ಬಾನುವಳ್ಳಿ ರಮೇಶ್ ರನ್ನು ಸನ್ಮಾನಿಸಿ ಗೌರವಿಸಿದರು.

error: Content is protected !!