ಅಬ್ದುಲ್‌ ಕಲಾಂ ಶಾಲೆಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ

ದಾವಣಗೆರೆ, ಫೆ. 26 -ದಾವಣಗೆರೆ ಜಿಲ್ಲೆಯ  ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 6ನೇ ತರಗತಿ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6 ನೇ ತರಗತಿ (ರಾಜ್ಯ ಪಠ್ಯಕ್ರಮ)ದಲ್ಲಿ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು  ಪ್ರವೇಶವಿರುತ್ತದೆ.

ಅರ್ಜಿಯನ್ನು ಮಾರ್ಚ್‌15 ರೊಳಗಾಗಿ ಸೇವಾ ಸಿಂಧು ಪೋರ್ಟಲ್‌  ವೆಬ್ ಸೈಟ್ https:// sevasindhuservices.karnataka.gov.in ನಲ್ಲಿ  ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕೊಂಡಜ್ಜಿ, ಹರಿಹರ.ತಾ. ಮೊ.ಸಂ: 9008815296, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೆರೆಬಿಳಚಿ, ಚನ್ನಗಿರಿ. ತಾ. ಮೊ.ಸಂ: 483075634, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಹೊಸಕುಂದುವಾಡ, ಸಿಂಗ್ರಳ್ಳಿ ದೇವೀರಮ್ಮ ಬಡಾವಣೆ, ದಾವಣಗೆರೆ ಟೌನ್ ಮೊ.ಸಂ: 9916828601, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಚಗೊಂಡನಹಳ್ಳಿ ನ್ಯಾಮತಿ.ತಾ. ಮೊ.ಸಂ: 9164855466, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಜಗಳೂರು.ತಾ. ಮೊ.ಸಂ: 9916828601, ತಾಲ್ಲೂಕು ವಿಸ್ತಾರಣಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಉಪ ವಿಭಾಗ ಮೊ.ಸಂ: 08192-250066, ಜಿಲ್ಲಾ ಮಾಹಿತಿ ಕೇಂದ್ರ ದಾವಣಗೆರೆ ಮೊ.ಸಂ: 7019837748, ತಾಲ್ಲೂಕು ಮಾಹಿತಿ ಕೇಂದ್ರ ಹರಿಹರ ಮೊ.ಸಂ: 9845329483, ತಾಲ್ಲೂಕು ಮಾಹಿತಿ ಕೇಂದ್ರ ಚನ್ನಗಿರಿ ಮೊ.ಸಂ: 8660520572, ತಾಲ್ಲೂಕು ಮಾಹಿತಿಕೇಂದ್ರ ಹೊನ್ನಾಳಿ ಮೊ.ಸಂ: 9739888820, ತಾಲ್ಲೂಕು ಮಾಹಿತಿ ಕೇಂದ್ರ ಜಗಳೂರು ಮೊ.ಸಂ: 9880392344 ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠದ್ ತಿಳಿಸಿದ್ದಾರೆ.

error: Content is protected !!