ಪ್ರಜಾಸತ್ತಾತ್ಮಕ ಮೌಲ್ಯಗಳ ಸೃಜನಶೀಲ ಲೇಖಕ ಶ್ರೀನಿವಾಸ್‌ಗೆ ಹಿರೇಮಠ ಪ್ರಶಸ್ತಿ

ಪ್ರಜಾಸತ್ತಾತ್ಮಕ ಮೌಲ್ಯಗಳ ಸೃಜನಶೀಲ ಲೇಖಕ ಶ್ರೀನಿವಾಸ್‌ಗೆ ಹಿರೇಮಠ ಪ್ರಶಸ್ತಿ

ದಾವಣಗೆರೆ, ಫೆ. 26- ನಾಡಿನ ಖ್ಯಾತ ಚಿಂತಕ, ಸಾಹಿತಿ ಪ್ರೊ. ಎಸ್.ಎಸ್. ಹಿರೇಮಠರ ಹೆಸರಿನ 2024 ನೇ ಸಾಲಿನ ಕಾವ್ಯ ಪ್ರಶಸ್ತಿಗೆ ನಾಡಿನ ಕವಿ, ಕಥೆಗಾರ, ಅನುವಾದಕರೂ ಆಗಿರುವ ನಗರದ ಬಿ. ಶ್ರೀನಿವಾಸ ಅವರು ಭಾಜನರಾಗಿದ್ದಾರೆ.

ಕನ್ನಡ ಸಾಹಿತ್ಯ ಪ್ರಕಾರವಾದ ಕಾವ್ಯ ಸಾಹಿತ್ಯದಲ್ಲಿ ಜನಪರ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಆಶಯ ಗಳನ್ನು ಸೃಜನಾತ್ಮಕವಾಗಿ ಅನಾವರಣಗೊಳಿಸಿ ದ್ದಲ್ಲದೆ, ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಿಗೊಳಿಸಿದ ಶ್ರೀನಿ ವಾಸ್‌ ಅವರು ಪ್ರಗತಿಪರ ಸಂಘಟನೆಗಳ ಒಡನಾಡಿ ಯಾಗಿ, ಮೂರು ದಶಕಗಳ ಕಾಲದ ಸಾಮಾಜಿಕ ಕಳಕಳಿಯ ಅವರ ಸಾಹಿತ್ಯಿಕ, ವೈಚಾರಿಕ ಸಾಧನೆಗೆ ಸಂದ ಫಲ ಎಂದು ಬಳ್ಳಾರಿಯ ಸಮಾಜ ವಿಜ್ಞಾನ ವೇದಿಕೆ ಅಭಿಪ್ರಾಯಪಟ್ಟಿದೆ.

ಬಳ್ಳಾರಿಯ ಗಾಂಧಿ ಭವನದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಸಮಾರಂಭದಲ್ಲಿ `ಜನಶಕ್ತಿ’ ಸಂಪಾ ದಕರು ಹಾಗೂ ಸಾಹಿತಿಗಳಾದ ಡಾ.ಎಸ್.ವೈ.ಗುರುಶಾಂತ್ ಮಾತನಾಡಿ, ಜೀವಪರ ವ್ಯಕ್ತಿತ್ವದ ಎಸ್.ಎಸ್.ಹಿರೇಮಠರ ಹೆಸರಿನ ಸಾಹಿತ್ಯ ಪ್ರಶಸ್ತಿಯು ಬಿ.ಶ್ರೀನಿವಾಸ ಅವರಿಗೆ ಸಂದಿರುವುದು ಅರ್ಥ ಪೂರ್ಣ ವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಡಾ.ಎಂಪಿ.ಎಂ.ವೀರಯ್ಯ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಾಜಿ ದೇವೇಂದ್ರಪ್ಪ, ಸಮಾಜ ವಿಜ್ಞಾನ ವೇದಿಕೆಯ ಪಿ.ಆರ್.ವೆಂಕಟೇಶ, ಶ್ರೀಮತಿ ಕಲಾವತಿ ಹವಾಲ್ದಾರ್, ಕವಿಗಳಾದ  ಬಿದಲೋಟಿ ರಂಗನಾಥ, ಮಮತಾ ಅರಸೀಕೆರೆ ಮತ್ತಿತರರು ವೇದಿಕೆಯಲ್ಲಿದ್ದರು.

error: Content is protected !!