ಗಾಯತ್ರಿ ಗುರುಕುಲ ಪಾಠಶಾಲೆ ಲೋಕಾರ್ಪಣೆ

ಗಾಯತ್ರಿ ಗುರುಕುಲ ಪಾಠಶಾಲೆ ಲೋಕಾರ್ಪಣೆ

ದಾವಣಗೆರೆ, ಫೆ. 25 – ಶ್ರೀ ಗಾಯತ್ರಿ ಗುರುಕುಲ ಪಾಠಶಾಲೆಯನ್ನು ದೀಪ ಬೆಳಗಿಸು ವುದರ  ಮೂಲಕ ಪ್ರಾಚಾರ್ಯ ಕೃಷ್ಣಾಚಾರ್ಯ ಗುರುಗಳು ಹಾಗೂ ಶ್ರೀ ಗಾಯತ್ರಿ ಗುರುಕುಲದ ಮುಖ್ಯಸ್ಥರು ಲೋಕಾರ್ಪಣೆಗೊಳಿಸಿದರು.

ಶಾಲೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಕೃಷ್ಣ ಆಚಾರ್ಯರು, ಸನಾತನ ಹಿಂದೂ ಸಂಸ್ಕೃತಿ ಉಳಿಸಿ, ಬೆಳೆಸಲು ಈ ತರಹದ ಗುರುಕುಲಗಳ ಅವಶ್ಯಕತೆ ಹೆಚ್ಚೆಚ್ಚು ಇದೆ ಎಂದು ತಿಳಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಮಾಜಿಕ ಸೇವಾ ಕಾರ್ಯಕರ್ತ ಅನಿಲ್ ರಾಯ್ಕರ್, ಒಬ್ಬ ವಿದ್ಯಾರ್ಥಿಗೆ ಎರಡು ವರ್ಷಗಳ ಕಾಲ ನಿರಂತರ ವಾಗಿ ನಮ್ಮ ಸನಾತನ ಹಿಂದೂ ಸಂಸ್ಕೃತಿಯ ಎಲ್ಲಾ ಆಚಾರ, ವಿಚಾರಗಳು, ಪದ್ಧತಿಗಳು ಸೇರಿದಂತೆ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಸೇರಿದಂತೆ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ, ಸಂಸ್ಕೃತ ಶ್ಲೋಕಗಳು ಸೇರಿದಂತೆ, ಹಣೆಗೆ ಕುಂಕುಮ ಇಡುವುದರ ಮಹತ್ವ, ಕೈಬಳೆ, ಕಾಲುಂಗುರ ಧರಿಸಿದರೆ ಆಗುವ ಲಾಭ ಸೇರಿದಂತೆ ಗುರು-ಹಿರಿಯರಿಗೆ ನಾವು ನೀಡಬೇಕಾದ ಗೌರವ ವನ್ನು ಪಠ್ಯಕ್ರಮದ ಮೂಲಕ ತಿಳಿಸಿ, ಪ್ರತಿ 3, 6, 9 ಹಾಗೂ 12 ತಿಂಗಳಿಗೆ ಪರೀಕ್ಷೆ ನಡೆಸುವ ಮೂಲಕ  ಶೇ. 85 ಪ್ರತಿಶತಃ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಿ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಂಕ್ಷಿಪ್ತ ಮಾಹಿತಿ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಟೆ ಮಾದೇಗೌಡ್ರು ಉಚಿತವಾಗಿ ಶ್ರೀ ಗಾಯತ್ರಿ ಗುರುಕುಲ ಶಾಲೆಯು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ರಿಂದ 5 ಗಂಟೆ ವರೆಗೆ ಪಿ.ಜೆ. ಬಡಾವಣೆಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆಯುತ್ತದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಯಾಗಿದ್ದ ಶಂಭುಲಿಂಗಪ್ಪ ವಾಲಿ, ಕಾರ್ಯಕ್ರಮವು ಯಾವುದೇ ಹಣ ಸಂಗ್ರಹ ವಿಲ್ಲದೆ ಕೇವಲ ಶ್ರೀ  ಗಾಯತ್ರಿ ಗುರುಕುಲ ಪಾಠಶಾಲೆಯ ಸದಸ್ಯರಿಂದ ಹಣ ಸಂಗ್ರಹಿಸಿ ನಿರಂತರವಾಗಿ ನಡೆಸುವುದು ಅತ್ಯಂತ ಶ್ಲ್ಯಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾಚಾರ್ಯರು ಎಲ್ಲಾ ಮಕ್ಕಳ ಕೈಯಿಂದ ಅಕ್ಷರ ಅಭ್ಯಾಸ ಮಾಡಿಸಿದರು. 

ಕಾರ್ಯಕ್ರಮದಲ್ಲಿ ಶ್ರೀಮತಿ ಸುನೀತಾ ಗುಜ್ಜರ್, ದೇವಿಕಾ, ಶಿಲ್ಪಾ ಗೋವಿಂದರಾಜ್ ಮಾತನಾಡಿ, ನಮ್ಮ ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಅವರಲ್ಲಿ ಜ್ಞಾನದ ಅರಿವನ್ನು ಮೂಡಿಸಲು ಶ್ರೀ ಗಾಯತ್ರಿ ಗುರುಕುಲ ಶಾಲೆ ಸಹಾಯಕಾರಿಯಾಗಲಿದೆ  ಎಂದು ಆಶಯ ವ್ಯಕ್ತ ಪಡಿಸಿದರು. ಎ.ಸಿ. ಕಿರಣ್, ಬಿ. ಉತ್ತಂಗಿ ನಾಗರಾಜ್, ಕುರುಡೇಕರ್, ಸುರೇಶ್, ಮಲ್ಲಿಕಾರ್ಜುನ್‌ ಎಂ., ಚಿದಾನಂದ, ಪ್ರವೀಣ್ ಇತರರು ಉಪಸ್ಥಿತರಿದ್ದರು.  

ಪ್ರಾರ್ಥನೆಯನ್ನು ಕು. ಶುಭ ಬೆಳಗಲ್ ನೆರವೇರಿಸಿದರು. ಸ್ವಾಗತವನ್ನು ಎಂ. ಮಲ್ಲಿಕಾರ್ಜುನ್, ಎಂ.ಕೆ. ಗಿರೀಶ್ ಅವರು ವಂದಿಸಿದರು.

error: Content is protected !!