ಮಕ್ಕಳ ಬೆಳವಣಿಗೆಗೆ ಶಿಕ್ಷಕರು ಹೆಚ್ಚಿನ ಪರಿಶ್ರಮ ವಹಿಸಬೇಕು

ಮಕ್ಕಳ ಬೆಳವಣಿಗೆಗೆ ಶಿಕ್ಷಕರು ಹೆಚ್ಚಿನ ಪರಿಶ್ರಮ ವಹಿಸಬೇಕು

ಮಲೇಬೆನ್ನೂರು ಫೆ. 25 – ಹರಿಹರ ತಾಲೂಕಿನ 55 ಶಾಲೆಗಳಿಗೆ ಶಾಲೆಗಳಿಗೆ ಲಕ್ಷಾಂತರ ರೂ ವೆಚ್ಚದಲ್ಲಿ ನಲಿ ಕಲಿ ಪೀಠೋಪಕರಣ, ನೋಟ್‍ಬುಕ್, ಶೌಚಾಲಯ ಗಣಕ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದೇವೆ. ಜೂನ್ ತಿಂಗಳಿನಲ್ಲಿ ನೂರಾರು ಬಡ ಮಕ್ಕಳಿಗೆ ಲೇಖನ ಸಾಮಗ್ರಿ ನೀಡಲು ಸಿದ್ದರಾಗಿದ್ದು ಬೇಡಿಕೆಗಳ ಪಟ್ಟಿ ನೀಡಲು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್‌ ಮುಖ್ಯಸ್ಥರಾದ ಅರುಣಾ ದಿವಾಕರ್ ಕೋರಿದರು.

 ನಂದಿತಾವರೆ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾವೇ ನೆರವು ನೀಡಿದ ಅನುದಾನದಲ್ಲಿ ದುರಸ್ತಿಯಾದ ಕೊಠಡಿ ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. 

15 ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಜೀವನ ಕಂಡಿದ್ದೇನೆ, ದಾನಿಗಳಿಂದ ಸಹಾಯ ಪಡೆದ ವಸ್ತುಗಳ ಸದ್ಭಳಕೆ ಬಗ್ಗೆ ಖಾತ್ರಿಯಾಗಿದೆ, 55 ಸಾವಿರ ಮಕ್ಕಳಿಗೆ ಸಹಾಯಗೈದ ಆತ್ಮ ಸಂತೃಪ್ತಿ ನಮಗಿದೆ, ಶಕ್ತಿ ಇರೋವರೆಗೆ ಸೇವೆಗೆ ಕೊನೆಯಿಲ್ಲ ಎಂದರು.

ಭಿಕ್ಷೆ ಬೇಡಿ ನೆರವು ನೀಡಲಾಗುತ್ತೇ ಮಕ್ಕಳ ಕುತೂಹಲದ ಕಲಿಕೆ ಕಾಣುತ್ತಿದೆ, ಕೆಲ ಶಾಲೆಗಳಲ್ಲಿ ವಸ್ತುಗಳ ಬಳಕೆಯೇ ಮಾಡುತ್ತಿಲ್ಲ, ಮಕ್ಕಳ ಬೆಳವಣಿಗೆಗೆ ಶಿಕ್ಷಕರಿಂದ ಸಮರ್ಪಕ ಪರಿಶ್ರಮ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಸೇವೆಗೆ ನ್ಯಾಯ ದೊರಕಬೇಕಿದೆ ಎಂದು ಅರುಣಾ ಹೇಳಿದರು.

 ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್‍ಕುಮಾರ್ ಹೆಗಡೆ ಮಾತನಾಡಿ, ಬೆಂಗಳೂರಿಗೂ ಮತ್ತು ಹರಿಹರ ತಾಲೂಕಿನ ಬಡ ಶಾಲೆಗಳಿಗೂ ಅವಿನಾಭಾವ ಸಂಬಂಧವಿದ್ದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್‍ನಿಂದ ನಂದಿತಾವರೆ ಪ್ರೌಢಶಾಲೆಯ ಎರಡು ಕೊಠಡಿಗಳ ದುರಸ್ತಿಯ ಜೊತೆಗೆ ಡೆಸ್ಕ್ ಗಳನ್ನೂ ಮತ್ತು ಮೇಲ್ಛಾವಣಿಯ ಶೀಟ್‍ಗಳನ್ನು ನೀಡಿದ್ದು ಉಳಿದ ಕೊಠಡಿಗಳ ಸುಣ್ಣ ಬಣ್ಣವನ್ನು ಇಲ್ಲಿನ ಶಿಕ್ಷಕರುಗಳೇ ಸ್ವಯಂ ಖರ್ಚು ಭರಿಸಿ ಅಭಿವೃಧ್ದಿ ಮಾಡಿರುವುದು ಅವರ ಕರ್ತವ್ಯದ ಬದ್ದತೆಯನ್ನು ತೋರಿಸಿದೆ ಎಂದರು.  

ತಾ, ಕಸಾಪ ಅಧ್ಯಕ್ಷ ಡಿ.ಎಂ, ಮಂಜುನಾ ಥಯ್ಯ ಮಾತನಾಡಿ, ಮಾತೃ ಹೃದಯಿ ಅರುಣಾ ಮೇಡಂ ಬಡ ಮಕ್ಕಳ ಕಷ್ಟ ಅರಿತು, ನೆರವು ನೀಡುತ್ತಿರುವುದು ಶಾಲಾ ಮಕ್ಕಳ ಹಾಜರಿ ಹೆಚ್ಚಾಗಲು ಕಾರಣವಾಗಿದೆ ಎಂದರು. 

ಮಖ್ಯ ಶಿಕ್ಷಕ ಬಿ.ಪಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವೆಂಕಟೇಶ್, ಕೆ ಬೀರಪ್ಪ, ಮಂಜಪ್ಪ ಬಿದರಿ, ಶಿಕ್ಷಣ ಸಂಯೋ ಜಕ ಹರೀಶ್, ಕಸಾಪ ಸಂಘಟನಾ ಕಾರ್ಯ ದರ್ಶಿ ಸದಾನಂದ, ಶಿಕ್ಷಕರಾದ ಕೆ ಹೊನ್ನಪ್ಪ, ಉಮೇಶ್, ನಾಗರಾಜ್, ಸುರೇಶ್  ಮತ್ತಿತ ರರು ಈ ವೇಳೆ ಹಾಜರಿದ್ದರು. ವಿದ್ಯಾರ್ಥಿ ಗಳಾದ ಶಮಂತ್, ಚಂದನಾ, ಯಶಸ್ವಿನಿ, ಸುಶೀಲಾ ತಮ್ಮ ಅನಿಸಿಕೆ ಹೇಳಿದರು.

error: Content is protected !!