ದಾವಣಗೆರೆ, ಫೆ. 25 -ಗುರು-ಹಿರಿಯರ ಹಬ್ಬವೆಂದು ಪ್ರತೀತ ಹೊಂದಿರುವ ಷಹಬಾನ್ ಹಬ್ಬವು ಮುಸ್ಲಿಂ ಬಾಂಧವರು ನಗರಾದ್ಯಂತ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಜಾಗರಣೆ ಆಚರಿಸಿದರು.
ಮೊದಲ ದಿನ ಹಬ್ಬ, ಎರಡನೇ ದಿನ ನಮಾಜ್ ಸಲ್ಲಿಸಿ ಈದ್ಗಾಗಳಿಗೆ ತೆರಳಿ ತಮ್ಮ ಸಂಬಂಧಿಗಳ ಹಿರಿಯರ ಘೋರಿಗಳಿಗೆ ಹೂಗಂಧ ಅರ್ಪಿಸಿ ದುವಾ ಮಾಡಲಾಯಿತು. ನಗರದ ವಿವಿಧ ಪ್ರದೇಶಗಳಿಂದ ಮಸೀದಿಗಳ ಸಮಿತಿ, ಪೇಷ್ ಇಮಾಂರೊಂದಿಗೆ ಹೆಜ್ಜೆ ಹಾಕಿದ ಮಕ್ಕಳು ಇಡೀ ರಾತ್ರಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹೆಣ್ಣು ಮಕ್ಕಳು ಬಣ್ಣ, ಬಣ್ಣದ ಸೀರೆಗಳನ್ನು ಧರಿಸಿಕೊಂಡು ಖುಷಿಯಿಂದ ಮಿಂಚಿ ತಮ್ಮ ಹಿರಿಯರ ಸ್ಮರಣೆಗೆ ಪುಷ್ಠಿಯಾದರು.