ದಾವಣಗೆರೆ, ಫೆ.25- ಅಕ್ರಮವಾಗಿ ಸಂಗ್ರಹ ಮಾಡಿಟ್ಟುಕೊಂಡಿದ್ದ 92 ಕೆ.ಜಿ. ತೂಕದ ಗಂಧದ ಮರದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೆ.14ರಂದು ಬಿಳಿಚೋಡು ಪೊಲೀಸ್ ಠಾಣಾ ವ್ಯಾಪ್ತಿಯ ಹಳವದಂಡೆ ಗ್ರಾಮದ ಸ್ವಾಮಿ ಎನ್ನುವವರ ತೋಟದ ಮಿಷನ್ ರೂಮಿನಲ್ಲಿ ಗಂಧದ ಮರಗಳ ತುಂಡುಗಳು ಪತ್ತೆಯಾಗಿವೆ. ಆರೋಪಿ ಹಳವದಂಡೆ ಗ್ರಾಮದ ಸ್ವಾಮಿ ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ.