ಮಾಯಕೊಂಡದಲ್ಲಿ ಭಕ್ತಿ -ಭಾವದ ಕಾಳು ಹುಣ್ಣಿಮೆ

ಮಾಯಕೊಂಡದಲ್ಲಿ ಭಕ್ತಿ -ಭಾವದ ಕಾಳು ಹುಣ್ಣಿಮೆ

ಮಾಯಕೊಂಡ, ಫೆ. 25- ಗ್ರಾಮದಲ್ಲಿ ಕಾಳು ಹುಣ್ಣಿಮೆಯನ್ನು ಭಕ್ತಿ ಭಾವದಿಂದ  ಆಚರಿಸಲಾಯಿತು. ಶನಿವಾರ ಸಂಜೆ‌ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ‌, ಅಭಿಷೇಕ ನೆರವೇರಿಸಲಾಯಿತು.  ಭಾನುವಾರ ಬೆಳಿಗ್ಗೆ ಅಗಸರ ಬಾವಿಯಿಂದ ಆಂಜನೇಯ ಸ್ವಾಮಿ ಮತ್ತು ದುರುಗಮ್ಮ ದೇವಿಗೆ ಹೊಳೆಪೂಜೆ ಮತ್ತು ಗಂಗಾಪೂಜೆ‌ ಮಾಡಿಸಿಕೊಂಡು ಗ್ರಾಮಕ್ಕೆ ಕರೆತರಲಾಯಿತು.  

ಆಂಜನೇಯ ಮತ್ತು ದುರುಗಮ್ಮ ದೇವಿಯ ಅಶ್ವತೇಜ ಮೂರ್ತಿಗಳನ್ನು ಹೊತ್ತು ಉರುಮೆ ವಾದ್ಯಗಳೊಂದಿಗೆ ಬರಲಾಯಿತು. ಭಕ್ತರು ಸಮರ್ಪಿಸಿದ  ಹಣ್ಣು, ಬೆಲ್ಲ  ಎಡೆಯನ್ನು ದಾಸರು ಮತ್ತು ಯುವಕರು ಮಣೇವು ಆಡಿ ಸೇವಿಸಿದರು.‌  ಉರುಮೆ ಸದ್ದಿಗೆ  ಹಲಗೆ ಹಿಡಿದ ದಾಸಪ್ಪಗಳು ಉನ್ಮತ್ತರಾಗಿ ಕುಣಿಯುತ್ತಿದ್ದರು. ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಳಿಸಿ ಮಹಾಮಂಗಳಾರತಿ ಮಾಡಲಾಯಿತು.  ಶನಿವಾರ ರಾತ್ರಿ ಬೇಯಿಸಿದ ಕಾಳನ್ನು‌ ಕೋಲುಕಾರ ಮತ್ತು ಗೌಡರ ನೇತೃತ್ವದಲ್ಲಿ ಭಕ್ತರಿಗೆ ಹಂಚ ಲಾಯಿತು. ಆಂಜನೇಯ ಸ್ವಾಮಿಗೆ ಚಿತ್ರದುರ್ಗದ ಗಿರೀಶ್ ಮತ್ತು ರವಿ ಕುಟುಂಬದವರು ಸಮರ್ಪಿಸಿದ ಬೆಳ್ಳಿ ಪ್ರಭಾವಳಿ ಮತ್ತು ಪುಷ್ಪಾಲಂಕಾರ ಕಣ್ಮನ ಸೆಳೆಯಿತು.

error: Content is protected !!