`ವಿಕಸಿತ ಭಾರತ @2047′ ಯುವ ಸಂವಾದ

`ವಿಕಸಿತ ಭಾರತ @2047′ ಯುವ ಸಂವಾದ

ದಾವಣಗೆರೆ, ಫೆ. 25 – ನಗರದ ಯುಬಿಡಿಟಿ ಇಂಜಿನಿಯರಿಂಗ್  ಕಾಲೇಜಿನಲ್ಲಿ ನಿನ್ನೆ ನಡೆದ ಯುವ ಸಂವಾದ ವಿಕಸಿತ ಭಾರತ @2047 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತ ಸರ್ಕಾರ ಪರ  ಸ್ಟ್ಯಾಂಡಿಂಗ್ ಗವರ್ನಮೆಂಟ್ ಕೌನ್ಸಿಲ್ ರಾಘವೇಂದ್ರ ಅವರು ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದದ ಹಿರಿಯ ವಕೀಲ ಎ.ಸಿ. ರಾಘವೇಂದ್ರ ಅವರು, ವಿಕಸಿತ ಭಾರತ ಯೋಜನೆ @2047 ಪ್ರಧಾನಿ ನರೇಂದ್ರ ಮೋದಿಯವರ ಕನಸು, ಭಾರತ 2047ರಲ್ಲಿ‌ ಸ್ವತಂತ್ರವಾಗಿ ತನ್ನ 100 ವರ್ಷ ಪೂರೈಸುತ್ತದೆ. ಅಂದು  ಅಭಿವೃದ್ದಿ ರಾಷ್ಟ್ರ ಮಾಡುವಲ್ಲಿ ಪ್ರತಿಯೊಬ್ಬ ಭಾರತೀಯ ಶ್ರಮಿಸಬೇಕು, ಇದರಲ್ಲಿ ಯುವ ಜನತೆಯ ಜವಾಬ್ದಾರಿ ಅತಿ ಹೆಚ್ಚು ಇದೆ ಎಂದು ಹೇಳಿದರು.

ತದ ನಂತರ ಯುವ ಸಂವಾದ, ವಿಕಸಿತ ಭಾರತ-2047ರ ವಿವಿಧ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಅಂಗವಾಗಿ  1. ಎಂಪವರ್‌ ಇಂಡಿಯಾ  2. ತ್ರೈವಿಂಗ್ ಅಂಡ್ ಸಸ್ಟೇನೆಬಲ್ ಎಕಾನಮಿ  3. ಇನ್ನೋವೇಷನ್ ಸೈನ್ಸ್ ಅಂಡ್‌  ಟೆಕ್ನಾಲಜಿ (ರಿಸರ್ಚ್‌ ಅಂಡ್‌ ಡೆವಲಪ್‌ಮೆಂಟ್, ಡಿಜಿಟಲ್) 4. ಗುಡ್ ಗವರ್ನನೆನ್ಸ್ ಅಂಡ್ ಸೆಕ್ಯುರಿಟಿ.  5. ಇಂಡಿಯಾ ಇನ್ ದಿ ವಲ್ಡ್‌ ಎಂಬ ವಿಷಯಗಳ ಮೇಲೆ ಚರ್ಚೆಯನ್ನು ನಡೆಸಲಾಯಿತು.  

ಕಾರ್ಯಕ್ರಮವನ್ನು ಎನ್ಎಸ್ಎಸ್ ವಿದ್ಯಾರ್ಥಿಗಳಾದ ಭರತ್ ಕುಮಾರ್, ನಂದಿನಿ ಎಸ್ ಆರ್, ರಕ್ಷಿತ್ ಹೆಚ್. ಎಲ್, ಲಿಖಿತ್ ಡಿ.ಡಿ, ಚಂದನ ನಡೆಸಿಕೊಟ್ಟರು. ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣರಾದ ಎನ್ಎಸ್ಎಸ್ ವಾಲಂಟೀಯರ್ ಗಳಾದ ರಾಘವೇಂದ್ರ, ಚರಣ್, ಮನೋಹರಿ ಸುಜಯ್, ಲಿಂಗರಾಜು, ಶಶಾಂಕ್ ಕೊಂಪಲ್, ಶಶಾಂಕ್ ಕೆ.ಎಸ್, ಸಾಹಿಲ್, ಯಶೋಧ ಡಿ.ಎಚ್, ನಾಗಲಕ್ಷ್ಮಿ, ಚಂದನ ಪಿ, ದೀಪಿಕಾ, ಸುಪ್ರಿಯಾ, ರಿಹನ ಸುಲ್ತಾನ್, ಚಮನ್ ಅಲಿ, ಅಕ್ಷತ, ಕಾವ್ಯ, ವೀಣಾ, ಬಿಂದು ಟಿ.ಎಸ್, ವಸಂತ ಮುಂತಾದವರು ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಪಿ ನಾಗರಾಜಪ್ಪ ವಹಿಸಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಎನ್.ಎಸ್.ಎಸ್. ಪ್ರೋಗ್ರಾಮ್ ಕೋಆರ್ಡಿನೇಟರ್ ಮಂಜಾನಾಯ್ಕ್ ವಹಿಸಿದ್ದರು. ಕೋ-ಕೋಅರ್ಡಿನೇಟರ್ ಶ್ರೀಮತಿ ರೇಖಾ ಜಿ. ಪಡಕಿ, ಇ.ಸಿ ವಿಭಾಗದ ಅಧ್ಯಕ್ಷ ರಜಪೂತ್‌ ಮತ್ತು ಇತರರು ಇದ್ದರು. 

ಕಾಲೇಜಿನ ಡೀನ್ ಅಡ್ಮಿನ್ ಡಾ. ಟಿ.ಡಿ. ವಿಷ್ಣುಮೂರ್ತಿ, ಡೀನ್  ಇನ್‌ಫ್ರಾಸ್ಟ್ರಕ್ಚರ್ ಡಾ. ಮಂಜುನಾಥ್, ಡೀನ್ ಅಕಾಡೆಮಿಕ್ ಡಾ. ಈರಪ್ಪ, ಡೀನ್ ರಿಸರ್ಚ್‌ ಅಂಡ್ ಡೆವಲಪಮೆಂಟ್ ಡಾ. ಮಂಜಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.

error: Content is protected !!