ಮಲೇಬೆನ್ನೂರು, ಫೆ.23- ಕೆ.ಬೇವಿನಹಳ್ಳಿ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಆಡಳಿತ ಮಂಡಳಿಗೆ ಇದೇ ದಿನಾಂಕ 16 ರಂದು ನಡೆದ ಚುನಾವಣೆಯಲ್ಲಿ 11 ಜನ ನಿರ್ದೇಶಕರುಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಜಿ.ಮಲ್ಲಿಕಾರ್ಜುನಪ್ಪ ಮತ್ತು ಉಪಾಧ್ಯಕ್ಷರಾಗಿ ಡಿ.ರಾಜಶೇಖರಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾದ ಜಿ.ಕೊಟ್ರಪ್ಪ, ಬಿ.ಎ.ರುದ್ರಮುನಿ, ಎ.ಎಸ್.ಗುರುರಾಜ್, ಶ್ರೀಮತಿ ರೇಣುಕಮ್ಮ ಕೊಟ್ರೇಶಪ್ಪ, ಎ.ವಿಶ್ವನಾಥ್, ಟಿ.ರೇವಣಸಿದ್ದಪ್ಪ, ಹೆಚ್.ಜಯಪ್ಪ, ಶ್ರೀಮತಿ ವೀರ ವೆಂಕಟಲಕ್ಷ್ಮಿ ಸತ್ಯನಾರಾಯಣ ಮತ್ತು ಜಿ.ನಾಗೇಶ್ವರಾವ್ ಈ ವೇಳೆ ಹಾಜರಿದ್ದರು.