ದಾವಣಗೆರೆ, ಫೆ.23- ಇಲ್ಲಿಗೆ ಸಮೀಪದ ನಾಗನೂರು ಗ್ರಾಮದ ಮಹೇಶ್ವರಯ್ಯ ತಂದೆ ಸಿದ್ದಲಿಂಗಯ್ಯ ಇವರ ತೋಟದ ಬುದುವಿನ ಪಕ್ಕದಲ್ಲಿ ಸುಮಾರು 55 ರಿಂದ 60 ವಯಸ್ಸಿನ ವ್ಯಕ್ತಿಯೊಬ್ಬನ ಮೃತ ದೇಹವು ದೊರೆತಿದೆ.
ಮೃತನ ಮೈಮೇಲೆ ನೀಲಿ ಬಣ್ಣದ ಬನಿಯನ್ ಹಾಗೂ ಮಾಸಲು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ನೋಡಲು ಭಿಕ್ಷುಕನಂತೆ ಕಾಣುತ್ತಿರುವುದರಿಂದ ಮೃತನ ಹೆಸರು ವಿಳಾಸ, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮಾಹಿತಿ ದೊರೆತಲ್ಲಿ ಹದಡಿ ಪೊಲೀಸ್ ಠಾಣೆ (08192-218405, 94808 03254, ಕಂಟ್ರೋಲ್ ರೂಂ-08192-253100) ಯನ್ನು ಸಂಪರ್ಕಿಸು ವಂತೆ ಹದಡಿ ಪೊಲೀಸ್ ಉಪನಿರೀಕ್ಷಕ ಅಕ್ಬರ್ ಮುಲ್ಲಾ ತಿಳಿಸಿದ್ದಾರೆ.