ದಾವಣಗೆರೆ, ಫೆ.23- ನಾಗನೂರು ಗ್ರಾಮದ ಶಾಮನೂರು ರಸ್ತೆ ಪಕ್ಕದಲ್ಲಿನ ಚಾಲನ್‍ನಲ್ಲಿ ಸುಮಾರು 60 – 65 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಫೆ.18 ರಂದು ಒಂದು ಮೃತ ದೇಹ ತೇಲಿಕೊಂಡು ಬರುವುದನ್ನು ಕಂಡು ಹಳೇಬಿಸಲೇರಿ ಗ್ರಾಮದ ಶಿವಪ್ಪ ಪೋಲಿಸ್ ಠಾಣೆಗೆ ದೂರು ಕೊಟ್ಟಿರುತ್ತಾರೆ.
ಸಾಧಾರಣ ಮೈ ಕಟ್ಟು, ಮೈಮೇಲೆ ಬಂಗಾರದ ಬಣ್ಣದ ಎಲೆಗಳ ಚಿತ್ರವಿರುವ ನೀಲಿ ಹಾಗೂ ಕೆಂಪು ಬಣ್ಣದ ಸೀರೆ, ಕಪ್ಪು ಬಣ್ಣದ ಜಾಕೀಟು, ಕುತ್ತಿಗೆಯಲ್ಲಿ ರೋಡ್‍ಗೋಲ್ಡ್ ಸರ, ಕಿವಿಯಲ್ಲಿ ಹರಳಿನ ಓಲೆ, ಕೈಯಲ್ಲಿ ಕೆಂಪು ಬಣ್ಣದ ಬಳೆಗಳು ಇರುತ್ತವೆ. ಸಂಬಂಧಪಟ್ಟವರು ಹದಡಿ ಠಾಣೆ (9980803254, 08192-218405, ಕಂಟ್ರೋಲ್ ರೂಂ. ನಂ.08192-253100)ಯನ್ನು ಸಂಪರ್ಕಿಸಬಹುದು ಎಂದು ಉಪ ನೀಕ್ಷಕರರಾದ ಅಕ್ಬರ್ ಮುಲ್ಲಾ ತಿಳಿಸಿದ್ದಾರೆ.