ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಎಂ.ಎಂ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ದತ್ತಿ ಕಾರ್ಯಕ್ರಮ ನಡೆಯಲಿದೆ. ಡಾ. ಕೆ.ಟಿ. ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಡಾ. ನಾ. ಲೋಕೇಶ್ ಒಡೆಯರ್, ಜಿ.ಎಂ. ಕುಮಾರಪ್ಪ ದತ್ತಿ ದಾನಿಗಳ ಪರಿಚಯಿಸುವರು. ಪ್ರಮೀಳಾ ನಟರಾಜ್, ಎಂ. ಪರಮೇಶ್ವರಪ್ಪ, ಎಸ್.ಬಿ. ರುದ್ರಗೌಡ ಗೌರವ ಉಪಸ್ಥಿತರಿರುವರು. ಎಂ. ನೀಲಾಂಬಿಕೆ, ಡಾ. ಎಂ. ಈಶ್ವರಮ್ಮ ಹಾಗೂ ಮಕ್ಕಳು ದತ್ತಿ ದಾನಿಗಳಾಗಿರುವರು.
February 27, 2025