ದಾವಣಗೆರೆ, ಫೆ. 22- ದಾವಣಗೆರೆ ವಿವಿ ಎಂ.ಬಿ.ಎ. ಸ್ನಾತಕೋತ್ತರ ಪರೀಕ್ಷೆಯಲ್ಲಿ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಅಂಡ್ ರೀಸರ್ಚ್ (BAMR) ವಿದ್ಯಾರ್ಥಿಗಳು 9 ರ್ಯಾಂಕ್ಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಶಾಜಿಯಾ (1ನೇ ರ್ಯಾಂಕ್), ಶಿವಾನಂದ್ ಬರಾಡಿ (2ನೇ ರ್ಯಾಂಕ್), ಬಿ. ಪ್ರಿಯಾ, ಭಾರ್ಗವಿ ಎಸ್. ಇನಾಂದಾರ್ (3ನೇ ರ್ಯಾಂಕ್), ಹೆಚ್.ಎಂ. ಮುಸ್ಕಾನ್ (4ನೇ ರ್ಯಾಂಕ್), ತೇಜಸ್ವಿನಿ ಐರಣಿ (5ನೇ ರ್ಯಾಂಕ್), ಹೆಚ್. ಪಲ್ಲವಿ (6ನೇ ರ್ಯಾಂಕ್), ಶಿರಿಶಾ ವಿ. (7ನೇ ರ್ಯಾಂಕ್), ತಸ್ಮಿಯಾ ಬಾನು (10ನೇ ರ್ಯಾಂಕ್) ಅವರಿಗೆ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಬಾಪೂಜಿ ಬಿ ಸ್ಕೂಲ್ಸ್ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ, ನಿರ್ದೇಶಕ ಡಾ. ಸ್ವಾಮಿ ತ್ರಿಭುವಾ ನಂದ ಹೆಚ್.ವಿ. ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.