ಅಪರಿಚಿತ ವ್ಯಕ್ತಿಯ ಶವ ಪತ್ತೆ

ದಾವಣಗೆರೆ, ಫೆ.21- ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದ ಎದುರಿನ ರಸ್ತೆಯಲ್ಲಿ   ನಡೆದುಕೊಂಡು ಹೋಗುತ್ತಿದ್ದ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

ತೆಳ್ಳನೆಯ ಮೈಕಟ್ಟು, ಉದ್ದನೆಯ ಉಬ್ಬು ಹಲ್ಲುಗಳು, 3 ಇಂಚು ಉದ್ದದ ಕಪ್ಪು ಮತ್ತು ಬಿಳಿ ಬಣ್ಣ ಕುರುಚಲಿನಂತೆ ಕಾಣುವ ಕೂದಲು ಚಹರೆ ಹೊಂದಿರುವ ಈತ, ಕೊಳಕಾದ ಹಳದಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ದಕ್ಷಿಣ ಸಂಚಾರ ಪೊಲೀಸ್ ಠಾಣೆ ದೂ.ಸಂಖ್ಯೆ 08192 – 59238, 253400, 259213, 9480803253,  9480803237, ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಲು ಸಂಚಾರ ವೃತ್ತ ನಿರೀಕ್ಷಕ ನಲವಾಗಿಲು ಮಂಜುನಾಥ ತಿಳಿಸಿದ್ದಾರೆ.

error: Content is protected !!