ಮಲೇಬೆನ್ನೂರು, ಫೆ.20- ಉಕ್ಕಡಗಾತ್ರಿ ಗ್ರಾ.ಪಂ.ನ ಉಪಾಧ್ಯಕ್ಷರಾಗಿ ಭರಮಗೌಡ ಶಿವಪೂಜೆ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪಿ.ಆರ್.ರಾಮಕೃಷ್ಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಭಾರತಿ ಕಟಿಗೇರ. ಪಿಡಿಓ ಟಿ.ಪಿ. ರಾಮಚಂದ್ರಪ್ಪ ಮತ್ತು ಇತರರು ಹಾಜರಿದ್ದರು.