ವಾಲ್ಮೀಕಿ ಮಹಾದ್ವಾರ ತೆರವುಗೊಳಿಸಲು ಬಿಡುವುದಿಲ್ಲ

ವಾಲ್ಮೀಕಿ ಮಹಾದ್ವಾರ ತೆರವುಗೊಳಿಸಲು ಬಿಡುವುದಿಲ್ಲ

ಹರಿಹರ, ಫೆ.20- ಭಾನುವಳ್ಳಿ ಗ್ರಾಮದಲ್ಲಿ ಹಾಲಮತ ಸಮಾಜದವರು ವಾಲ್ಮೀಕಿ ಮಾಹಾದ್ವಾರವನ್ನು ಮತ್ತು ನಾಮಫಲಕ ತೆರವುಗೊಳಿಸಲು ಸರ್ಕಾರಕ್ಕೆ ಹತ್ತು ದಿನಗಳ ಕಾಲ ಗಡುವು ನೀಡಿದ್ದು, ನಮ್ಮ ಪ್ರಾಣವನ್ನು ಅರ್ಪಣೆ ಮಾಡಿಯಾದರು ವಾಲ್ಮೀಕಿ ಮಹಾದ್ವಾರ ಮತ್ತು ನಾಮಫಲಕ ವನ್ನು ತೆರವುಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ವಾಲ್ಮೀಕಿ ಸಮಾಜದ ಮುಖಂಡರಾದ ಭಾನುವಳ್ಳಿ‌ ಟಿ. ಪುಟ್ಟಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಜಿಗಳಿ ಕೆ.ಆರ್. ರಂಗಪ್ಪ, ಎಸ್.ಪಿ. ಮೋಹನ್ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಗ್ರಾಮ ಪಂಚಾಯತಿ ವ್ಯಾಪ್ತಿ ಅಷ್ಟೊಂದು ಇರದೇ ಇದ್ದ ಸಮಯದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ತಾ.ಪಂ. ಕಚೇರಿಯ
ವತಿಯಿಂದ ನಡೆಯುತ್ತಿದ್ದು, ಅಂದು ಮಾಜಿ ಸಚಿವರಾಗಿದ್ದ ದಿ. ಹೆಚ್.ಶಿವಪ್ಪ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಭಾನುವಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮಹಾದ್ವಾರದ ಕಾಮಗಾರಿ ಆರಂಭ ಮಾಡಲಾಯಿತು ಎಂದರು.

 ಆ ಸಮಯದಲ್ಲಿ ಕಾಮಗಾರಿ ಗುತ್ತಿಗೆ ಪಡೆದಿದ್ದ ವ್ಯಕ್ತಿ ಕೊಟ್ರಪ್ಪ ಎ.ಜಿ. ಇವರು  ನಮ್ಮ ಜೊತೆಗೇ ಇದ್ದು, ಅವರೆ ಅವತ್ತು ಹೇಗೆ, ಯಾವ ಅನುದಾನದ ಅಡಿಯಲ್ಲಿ ಕಾಮಗಾರಿ ಆರಂಭ ಮಾಡಲಾಯಿತು ಎಂದು ಪ್ರಸ್ತಾಪ ಮಾಡುತ್ತಿರುವಾಗ, ಈವಾಗ ಹಾಲುಮತ ಸಹೋದರ ಸಮಾಜದವರು ಯಾವುದೇ ರೀತಿಯ ದಾಖಲೆಗಳು ಇಲ್ಲದೆ, ಮಹರ್ಷಿ ವಾಲ್ಮೀಕಿ ಮಹಾದ್ವಾರವನ್ನು ತೆರವುಗೊಳಿಸಲು ಸರ್ಕಾರಕ್ಕೆ ಗಡುವು ಕೊಟ್ಟಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಆರ್.ಸಿ. ಪಾಟೀಲ್, ಬಿ.ಎಂ. ಮಂಜಪ್ಪ,  ಆಟೋ ರಾಜು, ಸಿದ್ದಪ್ಪ ದೊಡ್ಡಮನೆ, ಮಲ್ಲಪ್ಪ, ಭರತ್, ಧನರಾಜ್ ಇತರರು ಹಾಜರಿದ್ದರು. 

error: Content is protected !!